ADVERTISEMENT

ಸುಜುಕಿ ಆ್ಯಕ್ಸೆಸ್‌ ಜೊತೆ ಮ್ಯಾಕ್ಸಿಸ್‌ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 20:00 IST
Last Updated 6 ಮಾರ್ಚ್ 2020, 20:00 IST
ಬಿಂಗ್‌ ಲಿನ್‌ ವು
ಬಿಂಗ್‌ ಲಿನ್‌ ವು   

ಬೆಂಗಳೂರು:ಸುಜುಕಿ ಮೋಟರ್‌ಸೈಕಲ್‌ ಇಂಡಿಯಾ ಜೊತೆ ಮ್ಯಾಕ್ಸಿಸ್‌ ಇಂಡಿಯಾ ಹೊಸ ಒಪ್ಪಂದ ಮಾಡಿಕೊಂಡಿದ್ದು,ಅತ್ಯಧಿಕ ಮಾರಾಟವಾಗುತ್ತಿರುವ ಆ್ಯಕ್ಸೆಸ್‌ 125 ಬಿಎಸ್‌6 ಸ್ಕೂಟರ್‌ಗಳಲ್ಲಿ ನೂತನವಾಗಿ ಅಭಿವೃದ್ಧಿಪಡಿಸಲಾದ ಮ್ಯಾಕ್ಸಿಸ್‌ ಟೈರ್‌ಗಳು ಇರಲಿವೆ.

ಒಪ್ಪಂದದ ಕುರಿತು ಮಾಹಿತಿ ನೀಡಿದ ಮ್ಯಾಕ್ಸಿಸ್‌ ಇಂಡಿಯಾ ಮಾರುಕಟ್ಟೆ ಮುಖ್ಯಸ್ಥ ಬಿಂಗ್‌ ಲಿನ್‌ ವು, ‘ಭಾರತದ ರಸ್ತೆಗಳಿಗೆ ಅನುಗುಣವಾಗಿ ಹೊಸ ಟೈರ್‌ ಅಭಿವೃದ್ಧಿಪಡಿಸಲಾಗಿದೆ. ಇವುಗಳು ಹೆಚ್ಚಿನ ಗ್ರಿಪ್‌ ಹಾಗೂ ಇಂಧನ ಕ್ಷಮತೆಯನ್ನು ಹೊಂದಿವೆ. ಜನವರಿ 2020ರಿಂದ ಇವುಗಳ ತಯಾರಿಕೆ ಆರಂಭವಾಗಿದ್ದು, ಸುಖಕರವಾದ ಪ್ರಯಾಣಕ್ಕೆ ಹೇಳಿಮಾಡಿಸಿದಂತಿದೆ’ ಎಂದರು.

ಬಿಎಸ್‌ 6 ವಾಹನಕ್ಕೆ ಪ್ರತ್ಯೇಕ ಟೈರ್‌: ‘ಭಾರತ್ ಸ್ಟೇಜ್-6 (ಬಿಎಸ್6) ಮಾದರಿಯ ವಾಹನಗಳನ್ನು ತಯಾರಿಸುವ ಕಂಪನಿಗಳು ಹೆಚ್ಚಿನ ಇಂಧನ ಕ್ಷಮತೆ ಇರುವ ಟೈರ್‌ಗಳಿಗೆ ಬೇಡಿಕೆ ಇಡುತ್ತಿವೆ. ಬಿಎಸ್‌6 ಹಾಗೂ ವಿದ್ಯುತ್‌ ಚಾಲಿತ ವಾಹನಗಳಿಗೆ ಸೂಕ್ತವಾದ ಟೈರ್‌ಗಳ ತಯಾರಿಸುವ ಸಾಮರ್ಥ್ಯವು ಮ್ಯಾಕ್ಸಿಸ್‌ಗೆ ಇದೆ. ಮ್ಯಾಕ್ಸಿಸ್‌ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ಇರುವ ತೈವಾನ್‌ನಲ್ಲಿ ದಶಕದ ಹಿಂದೆಯೇ ಬಿಎಸ್‌6 ಮಾದರಿ ವಾಹನಗಳು ರಸ್ತೆಗಿಳಿದಿವೆ. ಭಾರತದಲ್ಲೂ ಇಂಥ ಟೈರ್‌ಗಳ ತಯಾರಿಕೆಗೆ ಮ್ಯಾಕ್ಸಿಸ್‌ ಸಜ್ಜಾಗಿದೆ’ ಎಂದರು.

ADVERTISEMENT

‘2023ರೊಳಗೆ ಭಾರತದ ದ್ವಿಚಕ್ರ ವಾಹನ ಟೈರ್‌ ತಯಾರಿಕೆ ಮಾರುಕಟ್ಟೆಯ ಶೇ 15 ಪಾಲನ್ನು ನಾವು ಹೊಂದಿರಬೇಕು. 2026ರೊಳಗೆ ವಿಶ್ವದ ಪ್ರಮುಖ ಐದು ಟೈರ್‌ ತಯಾರಿಕಾ ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯಬೇಕು ಎನ್ನುವ ಗುರಿಯನ್ನು ಮ್ಯಾಕ್ಸಿಸ್‌ ಹೊಂದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.