ADVERTISEMENT

7 ಲಕ್ಷ ಟನ್‌ ಕಾಫಿ ಉತ್ಪಾದನೆ ಗುರಿ: ಎಂ.ಜೆ. ದಿನೇಶ್ ದೇವವೃಂದ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2025, 23:30 IST
Last Updated 12 ಮಾರ್ಚ್ 2025, 23:30 IST
<div class="paragraphs"><p>ಕಾಫಿ </p></div>

ಕಾಫಿ

   

ಬಾಳೆಹೊನ್ನೂರು (ಚಿಕ್ಕಮಗಳೂರು): ‘ದೇಶದಲ್ಲಿ ಮುಂದಿನ 10 ವರ್ಷಗಳಲ್ಲಿ  7 ಲಕ್ಷ ಟನ್ ಕಾಫಿ ಉತ್ಪಾದನೆಯ ಗುರಿ ಹೊಂದಲಾಗಿದೆ’ ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ದೇವವೃಂದ ತಿಳಿಸಿದರು.

ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವದ ಪ್ರಯುಕ್ತ ರಂಭಾಪುರಿ ಪೀಠದಲ್ಲಿ ನಡೆದ ಕೃಷಿ ಮೇಳದಲ್ಲಿ ‘ಕಾಫಿಯ ಕಣ, ಚಿಂತನ ಕಣಜ’ ಎಂಬ ವಿಷಯ ಕುರಿತು ಅವರು ಮಾತನಾಡಿದರು.

ADVERTISEMENT

‘ಕಾಫಿ ತೋಟಗಳಲ್ಲಿ ಅನುಭವಿ ಮೇಲ್ವಿಚಾರಕರು ಮತ್ತು ನುರಿತ ವ್ಯವಸ್ಥಾಪಕರ ಕೊರತೆ ಕಂಡು ಬರುತ್ತಿದೆ. ಇದನ್ನು ಪರಿಹರಿಸುವುದಕ್ಕಾಗಿ ಕಾಫಿ ಸಂಶೋಧನಾ ಕೇಂದ್ರದಲ್ಲಿ ಎಸ್ಟೇಟ್ ಮ್ಯಾನೇಜ್‍ಮೆಂಟ್ ತರಬೇತಿ ಹಮ್ಮಿಕೊಳ್ಳಲಾಗಿದೆ’ ಎಂದರು. 

‘ಇಂಡಿಕಾ’ ಬ್ರ್ಯಾಂಡ್‌ನಡಿ ಗುಣಮಟ್ಟದ ಕಾಫಿ ತಲುಪಿಸುವುದಕ್ಕೆ ಚಿಂತನೆ ನಡೆದಿದೆ. ಅದರ ಅಂಗವಾಗಿ ಕೆಫೆ ತೆರೆಯಲು ತರಬೇತಿ ನೀಡಲಾಗುತ್ತಿದೆ. ಡಿಸೆಂಬರ್ ಬಳಿಕ ಯೂರೋಪ್ ಒಕ್ಕೂಟ ನೆರಳು ರಹಿತ ಕಾಫಿ ಖರೀದಿಯನ್ನು ನಿಲ್ಲಿಸಲಿದ್ದು ನೆರಳಿನಡಿ ಕಾಫಿ ಬೆಳೆಯುವ ಭಾರತಕ್ಕೆ ಈ ನಿರ್ಧಾರ ವರವಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.