ADVERTISEMENT

Tata Capital: ಅ. 6ರಿಂದ ಟಾಟಾ ಕ್ಯಾಪಿಟಲ್‌ ಐಪಿಒ

ಪಿಟಿಐ
Published 29 ಸೆಪ್ಟೆಂಬರ್ 2025, 14:24 IST
Last Updated 29 ಸೆಪ್ಟೆಂಬರ್ 2025, 14:24 IST
   

ನವದೆಹಲಿ: ಬ್ಯಾಂಕೇತರ ಹಣಕಾಸು ಕಂಪನಿ (ಎನ್‌ಬಿಎಫ್‌ಸಿ) ಟಾಟಾ ಕ್ಯಾಪಿಟಲ್‌, ಸಾರ್ವಜನಿಕರಿಗೆ ಷೇರು ಮಾರಾಟ ಮಾಡುವ (ಐಪಿಒ) ಮೂಲಕ ₹15,512 ಕೋಟಿ ಬಂಡವಾಳ ಸಂಗ್ರಹಿಸಲು ಮುಂದಾಗಿದೆ. ಪ್ರತಿ ಷೇರಿನ ಬೆಲೆ ₹310ರಿಂದ ₹326ರವರೆಗೆ ಇರಲಿದೆ.

ಷೇರುಗಳಿಗೆ ಬಿಡ್‌ ಸಲ್ಲಿಸಲು ಅಕ್ಟೋಬರ್‌ 6ರಿಂದ 8ರವರೆಗೆ ಅವಕಾಶ ಇರಲಿದೆ. ಆರಂಭಿಕ ಹೂಡಿಕೆದಾರರು (ಆ್ಯಂಕರ್ ಇನ್‌ವೆಸ್ಟರ್ಸ್‌) ಅಕ್ಟೋಬರ್‌ 3ರಂದು ಐಪಿಒಗೆ ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 47.58 ಕೋಟಿ ಷೇರುಗಳನ್ನು ಮಾರಾಟ ಮಾಡುತ್ತಿದೆ. ಟಾಟಾ ಕ್ಯಾಪಿಟಲ್‌ನ ಮಾರುಕಟ್ಟೆ ಬಂಡವಾಳ ಮೌಲ್ಯ ₹1.38 ಲಕ್ಷ ಕೋಟಿ. 

ಟಾಟಾ ಕ್ಯಾಪಿಟಲ್‌ನಲ್ಲಿ ಟಾಟಾ ಸನ್ಸ್‌ ಶೇ 88.6ರಷ್ಟು ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಗಮ (ಐಎಫ್‌ಸಿ) ಶೇ 1.8ರಷ್ಟು ಪಾಲನ್ನು ಹೊಂದಿವೆ. ಐಪಿಒ ಮೂಲಕ ಸಂಗ್ರಹಿಸುವ ಮೊತ್ತವನ್ನು ಕಂಪನಿಯ ಬಂಡವಾಳದ ನೆಲೆ ಹೆಚ್ಚಿಸಿಕೊಳ್ಳಲು, ಸಾಲ ನೀಡಲು ಬಳಸಿಕೊಳ್ಳಲಾಗುತ್ತದೆ.

ADVERTISEMENT

ಟಾಟಾ ಕ್ಯಾಪಿಟಲ್‌ ಟಾಟಾ ಸಮೂಹದ ಸಂಸ್ಥೆಯಾಗಿದೆ. ದೇಶದ ಹಣಕಾಸು ವಲಯದಲ್ಲಿ ಈ ಐಪಿಒ ದೊಡ್ಡದು. ಇದು ಇತ್ತೀಚಿನ ದಿನಗಳಲ್ಲಿ ಟಾಟಾ ಸಮೂಹದ ಎರಡನೇ ಐಪಿಒ ಆಗಿದೆ. 

ಕಳೆದ ಆರ್ಥಿಕ ವರ್ಷದಲ್ಲಿ ಟಾಟಾ ಕ್ಯಾಪಿಟಲ್‌ ₹3,655 ಕೋಟಿ ತೆರಿಗೆ ನಂತರದ ಲಾಭ ಗಳಿಸಿತ್ತು. ವರಮಾನ ₹28,313 ಕೋಟಿಯಷ್ಟಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.