ADVERTISEMENT

ಸಾವಿರ ಹೊಸ ಮಳಿಗೆ ಸ್ಥಾಪನೆಗೆ ಟಾಟಾ ಸ್ಟಾರ್‌ಬಕ್ಸ್‌ ನಿರ್ಧಾರ

ಪಿಟಿಐ
Published 9 ಜನವರಿ 2024, 15:32 IST
Last Updated 9 ಜನವರಿ 2024, 15:32 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮುಂಬೈ: ದೇಶದಲ್ಲಿ ಮೂರು ದಿನಗಳಿಗೆ ಒಂದು ಹೊಸ ಮಳಿಗೆ ಆರಂಭಿಸಲು ಕಾಫಿ ಉತ್ಪನ್ನ ಮಾರಾಟ ಮಾಡುವ ಟಾಟಾ ಸ್ಟಾರ್‌ಬಕ್ಸ್‌ ನಿರ್ಧರಿಸಿದೆ.

ಪ್ರಸ್ತುತ ವಿವಿಧೆಡೆ 390 ಮಳಿಗೆ ಇವೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಇವುಗಳ ಸಂಖ್ಯೆಯನ್ನು ಒಂದು ಸಾವಿರಕ್ಕೆ ವಿಸ್ತರಿಸಲಾಗುವುದು. ಇದಕ್ಕಾಗಿ ಉದ್ಯೋಗಿಗಳ ಸಂಖ್ಯೆಯನ್ನು 8,600ಕ್ಕೆ ಹೆಚ್ಚಿಸಲಾಗುವುದು ಎಂದು ಕಂಪನಿ ತಿಳಿಸಿದೆ. 

ADVERTISEMENT

50 ಸಾವಿರದಿಂದ 1 ಲಕ್ಷ ಜನಸಂಖ್ಯೆ ಇರುವ ನಗರಗಳು (ಟಯರ್‌ 2) ಮತ್ತು 20 ಸಾವಿರದಿಂದ 50 ಸಾವಿರ ಜನಸಂಖ್ಯೆ ಇರುವ ಪಟ್ಟಣಗಳಲ್ಲಿ ಹೊಸ ಮಳಿಗೆಗಳನ್ನು ತೆರೆಯಲಾಗುತ್ತದೆ ಎಂದು ಹೇಳಿದೆ.

ಸ್ಟಾರ್‌ಬಕ್ಸ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮಣ್ ನರಸಿಂಹನ್ ಅವರು ಭಾರತಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿಯೇ ಕಂಪನಿಯಿಂದ ಈ ಘೋಷಣೆ ಹೊರಬಿದ್ದಿದೆ. 2023ರಲ್ಲಿ ಕಂಪನಿಯ ಉತ್ಪನ್ನಗಳ ಮಾರಾಟವು ಶೇ 71ರಷ್ಟು ಹೆಚ್ಚಾಗಿದ್ದು, ಒಟ್ಟು ₹1,087 ಕೋಟಿ ಲಾಭಗಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.