ADVERTISEMENT

ಟಾಟಾ ಸ್ಟೀಲ್‌ ಮಾರಾಟ ಶೇ 6ರಷ್ಟು ಏರಿಕೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 15:14 IST
Last Updated 7 ಏಪ್ರಿಲ್ 2024, 15:14 IST
.......
.......   

ನವದೆಹಲಿ: 2023–24ನೇ ಆರ್ಥಿಕ ವರ್ಷದಲ್ಲಿ ಟಾಟಾ ಸ್ಟೀಲ್‌ ಇಂಡಿಯಾದ ಉಕ್ಕು ಮಾರಾಟದಲ್ಲಿ ಶೇ 6ರಷ್ಟು ಏರಿಕೆಯಾಗಿದೆ.  

ಒಟ್ಟು 1.99 ಕೋಟಿ ಟನ್‌ನಷ್ಟು ಉಕ್ಕು ಮಾರಾಟವಾಗಿದೆ. ರಿಟೇಲ್‌, ಆಟೊಮೋಟಿವ್‌ ಹಾಗೂ ರೈಲ್ವೆ ವಲಯದಲ್ಲಿ ಉಕ್ಕಿಗೆ ಬೇಡಿಕೆ ಹೆಚ್ಚಿದ್ದರಿಂದ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ ಎಂದು ಕಂಪನಿ ತಿಳಿಸಿದೆ.

ಆಟೊಮೋಟಿವ್‌ ಮತ್ತು ವಿಶೇಷ ಸರಕು ವಿಭಾಗದಲ್ಲಿನ ಮಾರಾಟವು ಶೇ 8ರಷ್ಟು ಹೆಚ್ಚಳವಾಗಿದೆ. ಒಟ್ಟು 26 ಲಕ್ಷ ಟನ್‌ ಮಾರಾಟವಾಗಿದೆ. 

ADVERTISEMENT

ಬ್ರ್ಯಾಡೆಂಡ್‌ ಮತ್ತು ರಿಟೇಲ್‌ ವಿಭಾಗದಲ್ಲಿ 65 ಲಕ್ಷ ಟನ್‌ ಮಾರಾಟವಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಮಾರಾಟದಲ್ಲಿ ಶೇ 11ರಷ್ಟು ಏರಿಕೆಯಾಗಿದೆ. ಕೈಗಾರಿಕೆ ಮತ್ತು ಪ್ರಾಜೆಕ್ಸ್ಟ್‌ ವಿಭಾಗದಲ್ಲಿ 77 ಲಕ್ಷ ಟನ್‌ ಮಾರಾಟವಾಗಿದೆ. ಈ ವಿಭಾಗದಲ್ಲಿ ಮಾರಾಟದಲ್ಲಿ ಒಟ್ಟಾರೆ ಶೇ 7.7ರಷ್ಟು ಏರಿಕೆಯಾಗಿದೆ. 

ವೈಯಕ್ತಿಕ ಮನೆ ನಿರ್ಮಾಣ ಮಾಡುವವರಿಗೆ ಇ–ಕಾಮರ್ಸ್‌ ವೇದಿಕೆ ಆಗಿರುವ ಟಾಟಾ ಸ್ಟೀಲ್‌ ಆಶಿಯಾನಾ ಒಟ್ಟು ₹2,240 ಕೋಟಿ ವರಮಾನ ಗಳಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 30ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.

ಉತ್ಪಾದನೆ ಎಷ್ಟು?:

2023–24ನೇ ಆರ್ಥಿಕ ವರ್ಷದಲ್ಲಿ ಕಂಪನಿಯು ದೇಶದಲ್ಲಿ 2.08 ಕೋಟಿ ಟನ್‌ನಷ್ಟು ಕಚ್ಚಾ ಉಕ್ಕು ಉತ್ಪಾದಿಸಿದೆ. ಕಳೆದ ವರ್ಷ 1.98 ಕೋಟಿ ಟನ್‌ನಷ್ಟು ಉತ್ಪಾದಿಸಿತ್ತು. ಇದಕ್ಕೆ ಹೋಲಿಸಿದರೆ ಉತ್ಪಾದನೆಯಲ್ಲಿ ಶೇ 4ರಷ್ಟು ಏರಿಕೆಯಾಗಿದೆ. 

ನೆದರ್ಲೆಂಡ್‌ನಲ್ಲಿರುವ ಸ್ಥಾವರವು 48 ಲಕ್ಷ ಟನ್‌ ಹಾಗೂ ಬ್ರಿಟನ್‌ನ ಸ್ಥಾವರವು 30.2 ಲಕ್ಷ ಟನ್‌ನಷ್ಟು ಉಕ್ಕು ಉತ್ಪಾದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.