ADVERTISEMENT

ಬಿಗ್‌ಬಾಸ್ಕೆಟ್‌ ಖರೀದಿಗೆ ಸಿಸಿಐ ಸಮ್ಮತಿ

ಪಿಟಿಐ
Published 29 ಏಪ್ರಿಲ್ 2021, 16:07 IST
Last Updated 29 ಏಪ್ರಿಲ್ 2021, 16:07 IST
ಟಾಟಾ ಸಮೂಹ
ಟಾಟಾ ಸಮೂಹ   

ನವದೆಹಲಿ: ಬಿಗ್‌ಬಾಸ್ಕೆಟ್ ಕಂಪನಿಯಲ್ಲಿನ ಶೇಕಡ 64.3ರಷ್ಟು ಷೇರುಗಳನ್ನು ಖರೀದಿಸುವ ಟಾಟಾ ಸಮೂಹದ ಪ್ರಸ್ತಾವಕ್ಕೆ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಸಮ್ಮತಿ ನೀಡಿದೆ.

ಟಾಟಾ ಸಮೂಹದ ‘ಟಾಟಾ ಡಿಜಿಟಲ್ ಲಿಮಿಟೆಡ್’ ಕಂಪನಿಯು ಬಿಗ್‌ ಬಾಸ್ಕೆಟ್‌ನಲ್ಲಿನ ಷೇರುಗಳನ್ನು ಖರೀದಿಸಲಿದೆ. 2011ರಲ್ಲಿ ಆರಂಭವಾದ ಬಿಗ್‌ಬಾಸ್ಕೆಟ್‌ ದೇಶದ 25 ನಗರಗಳಲ್ಲಿ ಸೇವೆ ಒದಗಿಸುತ್ತಿದೆ. ಗ್ರೋಫರ್ಸ್‌, ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಜೊತೆ ಬಿಗ್‌ಬಾಸ್ಕೆಟ್‌ ಸ್ಪರ್ಧಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT