ADVERTISEMENT

ಟಿಸಿಎಸ್‌ ಲಾಭದಲ್ಲಿ ಶೇ 7.2ರಷ್ಟು ಹೆಚ್ಚಳ

ಪಿಟಿಐ
Published 8 ಜನವರಿ 2021, 14:15 IST
Last Updated 8 ಜನವರಿ 2021, 14:15 IST

ಮುಂಬೈ: ದೇಶದ ಅತಿದೊಡ್ಡ ಸಾಫ್ಟ್‌ವೇರ್‌ ಸೇವಾ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ (ಟಿಸಿಎಸ್) ಡಿಸೆಂಬರ್‌ ತ್ರೈಮಾಸಿಕದ ಒಟ್ಟು ಲಾಭದಲ್ಲಿ ಶೇಕಡ 7.2ರಷ್ಟು ಹೆಚ್ಚಳ ಆಗಿದೆ. ಈ ತ್ರೈಮಾಸಿಕದಲ್ಲಿ ಕಂಪನಿಯು ₹ 8,701 ಕೋಟಿ ಲಾಭ ಗಳಿಸಿದೆ.

ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು ₹ 8,118 ಕೋಟಿ ಲಾಭ ಗಳಿಸಿತ್ತು. ತನ್ನ ಒಟ್ಟು ಆದಾಯವು 2020ರ ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ₹ 42,015 ಕೋಟಿ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

‘ಇದು ಡಿಸೆಂಬರ್‌ ತ್ರೈಮಾಸಿಕಗಳಲ್ಲಿ ಕಂಪನಿ ತೋರಿದ ಅತ್ಯುತ್ತಮ ಸಾಧನೆಗಳ ಸಾಲಿಗೆ ಸೇರುತ್ತದೆ’ ಎಂದು ಟಿಸಿಎಸ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಾಜೇಶ್ ಗೋಪಿನಾಥನ್ ತಿಳಿಸಿದ್ದಾರೆ. ಕಂಪನಿಯು ಷೇರುದಾರರಿಗೆ ₹ 6 ಮಧ್ಯಂತರ ಡಿವಿಡೆಂಡ್ ಘೋಷಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.