ADVERTISEMENT

ಟೊಯೋಟ ‘ಹಿಲಕ್ಸ್‌’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2022, 15:01 IST
Last Updated 20 ಜನವರಿ 2022, 15:01 IST
ಹಿಲಕ್ಸ್
ಹಿಲಕ್ಸ್   

ಬೆಂಗಳೂರು: ಟೊಯೋಟ ಕಿರ್ಲೋಸ್ಕರ್‌ ಮೋಟರ್‌ ಕಂಪನಿಯು ತನ್ನ ಐಕಾನಿಕ್‌ ಎಸ್‌ಯುವಿ ‘ಹಿಲಕ್ಸ್‌’ ಬಿಡುಗಡೆ ಮಾಡಿದೆ.

ಈ ಮಾದರಿಯ ಬುಕಿಂಗ್‌ ಆರಂಭವಾಗಿದ್ದು ಏಪ್ರಿಲ್‌ನಿಂದ ವಿತರಣೆ ಆರಂಭವಾಗುವ ನಿರೀಕ್ಷೆ ಇದೆ. ಕಂಪನಿಯು ಫೆಬ್ರುವರಿಯಲ್ಲಿ ಇದರ ಬೆಲೆ ಪ್ರಕಟಿಸುವ ನಿರೀಕ್ಷೆ ಇದೆ.

2.8 ಲೀಟರ್‌, 4 ಸಿಲಿಂಡರ್‌ ಟರ್ಬೊ ಡೀಸೆಲ್‌ ಎಂಜಿನ್‌ ಹೊಂದಿದ್ದು, ಮ್ಯಾನುಯಲ್‌ ಮತ್ತು ಆಟೊಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ಆಯ್ಕೆಗಳಲ್ಲಿ ಲಭ್ಯವಿದೆ.

ADVERTISEMENT

ಬೆಂಗಳೂರಿಗೆ ಸಮೀಪದ ಬಿಡದಿಯ ಘಟಕದಲ್ಲಿ ಇದನ್ನು ತಯಾರಿಸಲಾಗುವುದು. ಶೇ 30ರಷ್ಟು ಬಿಡಿಭಾಗಗಳು ಸ್ಥಳೀಯವಾಗಿ ಲಭ್ಯವಾಗುವಂಥವು ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.