ADVERTISEMENT

ಟೊಯೋಟಾ ಕಿರ್ಲೋಸ್ಕರ್‌ ಉಪಾಧ್ಯಕ್ಷ ಶೇಖರ್ ವಿಶ್ವನಾಥನ್‌ ಇದೇ 30ರಂದು ನಿವೃತ್ತಿ

ಪಿಟಿಐ
Published 28 ನವೆಂಬರ್ 2020, 16:07 IST
Last Updated 28 ನವೆಂಬರ್ 2020, 16:07 IST
ಶೇಖರ್ ವಿಶ್ವನಾಥನ್
ಶೇಖರ್ ವಿಶ್ವನಾಥನ್   

ನವದೆಹಲಿ: ಟೊಯೋಟಾ ಕಿರ್ಲೋಸ್ಕರ್‌ ಮೋಟರ್‌ನ (ಟಿಕೆಎಂ) ಉಪಾಧ್ಯಕ್ಷ ಶೇಖರ್‌ ವಿಶ್ವನಾಥನ್‌ ಅವರು ಇದೇ ನವೆಂಬರ್‌ 30ರಂದು ನಿವೃತ್ತಿಯಾಗಲಿದ್ದಾರೆ ಎಂದು ಕಂಪನಿ ಶನಿವಾರ ತಿಳಿಸಿದೆ.

ಅವರು ಏಳು ವರ್ಷಗಳಿಗೂ ಹೆಚ್ಚಿನ ಅವಧಿಗೆ ಕಂಪನಿಯ ಉಪಾಧ್ಯಕ್ಷ ಮತ್ತು ಪೂರ್ಣಾವಧಿಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ದೇಶದಲ್ಲಿ ಕಂಪನಿಯನ್ನು ಅಭಿವೃದ್ಧಪಡಿಸುವಲ್ಲಿ 20 ವರ್ಷಗಳಿಗೂ ಅಧಿಕ ಸಮಯದವರೆಗೆ ಕೆಲಸ ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT