ADVERTISEMENT

ಕಾಫಿ ಡೇ ಷೇರು ವಹಿವಾಟು ಏ. 26ರಿಂದ ಪುನರಾರಂಭ

ಪಿಟಿಐ
Published 17 ಏಪ್ರಿಲ್ 2021, 16:06 IST
Last Updated 17 ಏಪ್ರಿಲ್ 2021, 16:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಮುಂಬೈ (ಬಿಎಸ್ಇ) ಮತ್ತು ರಾಷ್ಟ್ರೀಯ ಷೇರುಪೇಟೆಗಳಲ್ಲಿ (ಎನ್‌ಎಸ್‌ಇ) ಏಪ್ರಿಲ್‌ 26ರಿಂದ ತನ್ನ ಷೇರುಗಳ ವಹಿವಾಟು ಪುನರಾರಂಭ ಆಗಲಿದೆ ಎಂದು ನಷ್ಟದಲ್ಲಿರುವ ಕಾಫಿ ಡೇ ಎಂಟರ್‌ಪ್ರೈಸಸ್‌ ಲಿಮಿಟೆಡ್‌ (ಸಿಡಿಇಎಲ್‌) ಶನಿವಾರ ತಿಳಿಸಿದೆ.

ಸಿಡಿಇಎಲ್‌ನ ಷೇರುಗಳನ್ನು ವಹಿವಾಟು ನಡೆಸುವುದರಿಂದ ಅಮಾನತು ಮಾಡಿದ್ದ ಆದೇಶವನ್ನು ರದ್ದುಮಾಡುವ ಕುರಿತು ಎನ್‌ಎಸ್‌ಇ ಮತ್ತು ಬಿಎಸ್‌ಇ ಶುಕ್ರವಾರ ಬರೆದಿರುವ ಪತ್ರದಲ್ಲಿ ತಿಳಿಸಿವೆ ಎಂದು ಬಿಎಸ್‌ಇಗೆ ಮಾಹಿತಿ ನೀಡಿದೆ.

2019ರ ಜೂನ್‌ ಮತ್ತು ಸೆಪ್ಟೆಂಬರ್‌ ತ್ರೈಮಾಸಿಕಗಳ ಹಣಕಾಸು ವರದಿಗಳನ್ನು ಸಲ್ಲಿಸದೇ ಇರುವ ಕಾರಣಕ್ಕಾಗಿ ಷೇರುಪೇಟೆಗಳು ಸಿಡಿಇಎಲ್‌ನ ಷೇರು ವಹಿವಾಟನ್ನು ಅಮಾನತಿನಲ್ಲಿ ಇಟ್ಟಿದ್ದವು. ಕಂಪನಿಯ ಸಾಲ ₹ 280 ಕೋಟಿಗಳಷ್ಟಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.