ADVERTISEMENT

11 ಅಂಕಿಗಳ ಮೊಬೈಲ್‌ ಸಂಖ್ಯೆಶಿಫಾರಸು ಮಾಡಿಲ್ಲ: ಟ್ರಾಯ್‌

ಪಿಟಿಐ
Published 31 ಮೇ 2020, 14:28 IST
Last Updated 31 ಮೇ 2020, 14:28 IST
-
-   

ನವದೆಹಲಿ :11 ಅಂಕಿಗಳ ಮೊಬೈಲ್‌ ಸಂಖ್ಯೆಗೆ ಶಿಫಾರಸು ಮಾಡಿಲ್ಲ. ಆದರೆ ಲ್ಯಾಂಡ್‌ಲೈನ್‌ನಿಂದ ಮೊಬೈಲ್‌ಗೆ ಕರೆ ಮಾಡುವಾಗ ಮೊಬೈಲ್‌ ಸಂಖ್ಯೆಯ ಮೊದಲಿಗೆ ‘0’ ಸೇರಿಸುವಂತೆ ಸಲಹೆ ನೀಡಲಾಗಿದೆ ಎಂದು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಸ್ಪಷ್ಟನೆ ನೀಡಿದೆ.

‘ಟ್ರಾಯ್‌’ ಶಿಫಾರಸಿನಂತೆ ದೇಶದಲ್ಲಿ ಮೊಬೈಲ್‌ ಸೇವೆಗಳಿಗೆ 10 ಅಂಕಿಗಳೇ ಇರಲಿವೆ. 11 ಅಂಕಿಗಳಿಗೆ ಬಹುತೇಕ ಎಲ್ಲಾ ಸೇವಾದಾತರೂ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಸಾಫ್ಟ್‌ವೇರ್‌ ಮತ್ತು ಹಾರ್ಡ್‌ವೇರ್‌ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಬೇಕಾಗಿ ಬರಲಿದ್ದು ಹೆಚ್ಚುವರಿ ವೆಚ್ಚವಾಗಲಿದೆ. ಗ್ರಾಹಕರಿಗೂ ಗೊಂದಲವಾಗಲಿದೆ. ಹೀಗಾಗಿ ಇದನ್ನು ತಿರಸ್ಕರಿಸಲಾಗಿದೆ. ಸೊನ್ನೆ ಸೇರಿಸುವುದರಿಂದ 254.4 ಕೋಟಿ ಹೆಚ್ಚುವರಿ ಸಂಖ್ಯೆಗಳು ಲಭ್ಯವಾಗಲಿವೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT