ADVERTISEMENT

ಟಿವಿಎಸ್‌: ರಫ್ತು ವಹಿವಾಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2022, 15:59 IST
Last Updated 1 ಮಾರ್ಚ್ 2022, 15:59 IST
   

ಬೆಂಗಳೂರು: ಟಿವಿಎಸ್ ಮೋಟರ್ ಕಂಪನಿಯು ಫೆಬ್ರುವರಿಯಲ್ಲಿ ಒಟ್ಟು 2.81 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ. ಹಿಂದಿನ ವರ್ಷದ ಫೆಬ್ರುವರಿಯಲ್ಲಿ ಕಂಪನಿಯು 2.97 ಲಕ್ಷ ವಾಹನಗಳನ್ನು ಮಾರಾಟ ಮಾಡಿತ್ತು.

ಈ ವರ್ಷದ ಫೆಬ್ರುವರಿಯಲ್ಲಿ ಕಂಪನಿಯು ಒಟ್ಟು 2.67 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ. ಸೆಮಿಕಂಡಕ್ಟರ್‌ಗಳ ಕೊರತೆಯು ಪ್ರೀಮಿಯಂ ದ್ವಿಚಕ್ರ ವಾಹನಗಳ ತಯಾರಿಕೆಯ ಮೇಲೆ ದುಷ್ಪರಿಣಾಮ ಉಂಟುಮಾಡಿದೆ ಎಂದು ಕಂಪನಿ ಹೇಳಿದೆ.

ಫೆಬ್ರುವರಿಯಲ್ಲಿ ಕಂಪನಿಯ ರಫ್ತು ವಹಿವಾಟು ಶೇಕಡ 6ರಷ್ಟು ಹೆಚ್ಚಳ ಕಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.