ADVERTISEMENT

ಯುಕೊ ಬ್ಯಾಂಕ್‌ ಲಾಭ ಏರಿಕೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2021, 16:39 IST
Last Updated 29 ಅಕ್ಟೋಬರ್ 2021, 16:39 IST

ಬೆಂಗಳೂರು: ಯೂಕೊ ಬ್ಯಾಂಕ್‌ನ ಸೆಪ್ಟೆಂಬರ್ ತ್ರೈಮಾಸಿಕ ನಿವ್ವಳ ಲಾಭವು ಶೇಕಡ 583ರಷ್ಟು ಹೆಚ್ಚಳವಾಗಿದ್ದು, ₹ 205.39 ಕೋಟಿಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್ ₹ 30.12 ಕೋಟಿ ನಿವ್ವಳ ಲಾಭ ಗಳಿಸಿತ್ತು.

ಹಿಂದಿನ ವರ್ಷದ ಈ ಅವಧಿಯಲ್ಲಿ ಬ್ಯಾಂಕ್‌ ಒಟ್ಟು ₹ 4,327.13 ಕೋಟಿ ಆದಾಯ ಗಳಿಸಿತ್ತು. ಈ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದ ಅವಧಿಯಲ್ಲಿ ಒಟ್ಟು ಆದಾಯವು ₹ 4,655.86 ಕೋಟಿಗೆ ಹೆಚ್ಚಳವಾಗಿದೆ.

ಬ್ಯಾಂಕ್‌ನ ವಸೂಲಾಗದ ಸಾಲದ (ಎನ್‌ಪಿಎ) ಒಟ್ಟು ಪ್ರಮಾಣವು ಸೆಪ್ಟೆಂಬರ್ ತ್ರೈಮಾಸಿಕದ ಕೊನೆಯಲ್ಲಿ ಶೇಕಡ 8.98ಕ್ಕೆ ಇಳಿಕೆ ಆಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಎನ್‌ಪಿಎ ಪ್ರಮಾಣವು ಶೇಕಡ 11.62ರಷ್ಟು ಇತ್ತು ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.