ADVERTISEMENT

ಸಾಲದ ಹರಿವು ಹೆಚ್ಚಿಸದ ಆರ್‌ಬಿಐ ಕ್ರಮ:ಮೂಡೀಸ್‌

ಪಿಟಿಐ
Published 19 ಏಪ್ರಿಲ್ 2020, 19:57 IST
Last Updated 19 ಏಪ್ರಿಲ್ 2020, 19:57 IST

ನವದೆಹಲಿ: ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್‌ಬಿಎಫ್‌ಸಿ) ಭಾರತೀಯ ರಿಸರ್ವ್‌ ಬ್ಯಾಂಕ್‌ ಕಲ್ಪಿಸಲಿರುವ ಹಣಕಾಸು ನೆರವು ಸಾಲದ ಹರಿವು ಹೆಚ್ಚಿಸುವುದಿಲ್ಲ ಎಂದು ಮೂಡೀಸ್‌ ಇನ್ವೆಸ್ಟರ್ಸ್‌ ಸರ್ವಿಸ್‌ ಅಂದಾಜಿಸಿದೆ.

‘ಬ್ಯಾಂಕ್‌ಗಳು ಆರ್‌ಬಿಐನಿಂದ ಕಡಿಮೆ ಬಡ್ಡಿ ದರಕ್ಕೆ ಪಡೆಯುವ ₹ 50 ಸಾವಿರ ಕೋಟಿ ಸಾಲವನ್ನು ‘ಎನ್‌ಬಿಎಫ್‌ಸಿ’ಗಳ ಹೂಡಿಕೆ ದರ್ಜೆಯ ಬಾಂಡ್‌, ಪರಿವರ್ತಿಸಲಾಗದ ಸಾಲಪತ್ರಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಇದರಲ್ಲಿನ ಶೇ 50ರಷ್ಟು ಪಾಲನ್ನು ಚಿಕ್ಕ ಗಾತ್ರದ ‘ಎನ್‌ಬಿಎಫ್‌ಸಿ’ ಮತ್ತು ಕಿರು ಹಣಕಾಸು ಸಂಸ್ಥೆಗಳಿಗೆ ಮೀಸಲು ಇಡಲಾಗಿದೆ. ಈ ನೆರವಿನ ಹಣವನ್ನು ‘ಎನ್‌ಬಿಎಫ್‌ಸಿ’ಗಳು ತಮ್ಮ ಹಣಕಾಸು ಪರಿಸ್ಥಿತಿ ಸುಧಾರಿಸಲು ಬಳಸಿಕೊಳ್ಳಲು ಆದ್ಯತೆ ನೀಡಲಿವೆ. ಸಾಲ ನೀಡಿಕೆ ಹೆಚ್ಚಿಸಲು ಬಳಸಿಕೊಳ್ಳುವ ಸಾಧ್ಯತೆ ಕಡಿಮೆ ಇದೆ ಎನ್ನುವುದು ನಮ್ಮ ಅಂದಾಜಾಗಿದೆ’ ಎಂದು ಮೂಡೀಸ್‌ನ ಹಣಕಾಸು ಸಂಸ್ಥೆಗಳ ಉಪಾಧ್ಯಕ್ಷೆ ಅಲ್ಕಾ ಅನ್‌ಬರಸು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT