ADVERTISEMENT

ಅದಾನಿ ಸಮೂಹದ ₹5,400 ಕೋಟಿ ಮೌಲ್ಯದ ಬಿಡ್ ರದ್ದು ಮಾಡಿದ ಮಧ್ಯಾಂಚಲ ವಿದ್ಯುತ್ ನಿಗಮ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 2:54 IST
Last Updated 7 ಫೆಬ್ರುವರಿ 2023, 2:54 IST
ಅದಾನಿ ಸಮೂಹಗಳ ಉದ್ಯಮಿ ಗೌತಮ್‌ ಅದಾನಿ
ಅದಾನಿ ಸಮೂಹಗಳ ಉದ್ಯಮಿ ಗೌತಮ್‌ ಅದಾನಿ   

ಲಖನೌ: ಉತ್ತರ ಪ್ರದೇಶ ಸರ್ಕಾರದ ಮಾಲೀಕತ್ವದ ಮಧ್ಯಾಂಚಲ ವಿದ್ಯುತ್ ವಿತರಣ ನಿಗಮವು, ಸ್ಮಾರ್ಟ್‌ ಪ್ರಿಪೇಯ್ಡ್‌ ಮೀಟರ್‌ ಅಳವಡಿಸಲು ಅದಾನಿ ಸಮೂಹದ ಕಂಪನಿಯೊಂದು ಸಲ್ಲಿಸಿದ್ದ ₹ 5,400 ಕೋಟಿ ಮೌಲ್ಯದ ಬಿಡ್‌ ರದ್ದು ಮಾಡಿದೆ.

ಅದಾನಿ ಸಮೂಹದ ಕಂಪನಿಯ ಬಿಡ್‌ ಅತ್ಯಂತ ಕಡಿಮೆ ಬೆಲೆಯದ್ದಾಗಿದ್ದರೂ, ಆ ಕಂಪನಿಯು ಸ್ಮಾರ್ಟ್‌ ಮೀಟರ್‌ ಖರೀದಿಗೆ ನಮೂದಿಸಿದ್ದ ಬೆಲೆಯು ನಿರೀಕ್ಷೆ ಮಾಡಿದ್ದ ಬೆಲೆಗಿಂತ ಜಾಸ್ತಿ ಆಗಿತ್ತು ಎಂದು ಮೂಲಗಳು ಹೇಳಿವೆ.

ಮಧ್ಯಾಂಚಲ ಪ್ರದೇಶದಲ್ಲಿ ಒಟ್ಟು 70 ಲಕ್ಷ ಸ್ಮಾರ್ಟ್‌ ಮೀಟರ್ ಪೂರೈಸುವ ಬಿಡ್‌ನ ಅಂತಿಮ ಹಂತಕ್ಕೆ ಅದಾನಿ ಸಮೂಹದ ಕಂಪನಿ ತಲುಪಿತ್ತು. ಪ್ರತಿ ಮೀಟರ್‌ಗೆ ₹ 10 ಸಾವಿರ ಬೇಕಾಗುತ್ತದೆ ಎಂದು ಕಂಪನಿ ಹೇಳಿತ್ತು. ಆದರೆ ಕೇಂದ್ರ ಸರ್ಕಾರದ ನಿಯಮಗಳ ಅನ್ವಯ ಅದರ ಬೆಲೆಯು ₹ 6 ಸಾವಿರ ಮೀರುವಂತೆ ಇರಲಿಲ್ಲ ಎಂದು ಮೂಲಗಳು ವಿವರಿಸಿವೆ.

ADVERTISEMENT

ತಾಂತ್ರಿಕ ಕಾರಣಗಳಿಂದಾಗಿ ಬಿಡ್‌ ರದ್ದು ಮಾಡಲಾಗಿದ್ದು, ಹೊಸದಾಗಿ ಬಿಡ್ ಆಹ್ವಾನಿಸಲಾಗಿದೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.