ನವದೆಹಲಿ: ಅಮೆರಿಕವು ಸತತ ನಾಲ್ಕನೇ ವರ್ಷವೂ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿ ಹೊರಹೊಮ್ಮಿದೆ.
2024–25ನೇ ಆರ್ಥಿಕ ವರ್ಷದಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ವಹಿವಾಟಿನ ಮೌಲ್ಯವು ₹11.28 ಲಕ್ಷ ಕೋಟಿ ಆಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ.
ಇದೇ ಅವಧಿಯಲ್ಲಿ ಚೀನಾದ ಜೊತೆಗಿನ ಭಾರತದ ವ್ಯಾಪಾರ ಕೊರತೆ ಅಂತರವು ₹8.49 ಲಕ್ಷ ಕೋಟಿ ಆಗಿದೆ. ರಫ್ತು ಮೌಲ್ಯಕ್ಕಿಂತ ಆಮದು ಮೌಲ್ಯ ಹೆಚ್ಚಿದ್ದರೆ ಈ ಅಂತರವನ್ನು ವ್ಯಾಪಾರ ಕೊರತೆ ಎಂದು ಅರ್ಥೈಸಲಾಗುತ್ತದೆ.
ಭಾರತವು ಅಮೆರಿಕಕ್ಕೆ ಪ್ರಮುಖವಾಗಿ ಔಷಧ, ಅಮೂಲ್ಯ ಹರಳು, ಪೆಟ್ರೋಲಿಯಂ ಉತ್ಪನ್ನ, ಚಿನ್ನಾಭರಣ, ಸಿದ್ಧಉಡುಪು, ಕಬ್ಬಿಣ ಮತ್ತು ಉಕ್ಕು, ಎಲೆಕ್ಟ್ರಾನಿಕ್ ಉಪಕರಣಗಳನ್ನು ರಫ್ತು ಮಾಡಿದೆ. ಅಲ್ಲಿಂದ ಕಚ್ಚಾ ತೈಲ, ಪೆಟ್ರೋಲಿಯಂ ಉತ್ಪನ್ನ, ಕಲ್ಲಿದ್ದಲು, ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರ, ಎಲೆಕ್ಟ್ರಾನಿಕ್ ಉಪಕರಣ, ಏರ್‌ಕ್ರಾಫ್ಟ್, ಸ್ಪೇಸ್‌ಕ್ರಾಫ್ಟ್ ಮತ್ತು ಅವುಗಳ ಬಿಡಿಭಾಗ, ಚಿನ್ನವನ್ನು ಆಮದು ಮಾಡಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.