ADVERTISEMENT

ಯುಟಿಐ ಎಎಂಸಿ: ಆ್ಯಂಕರ್‌ ಇನ್ವೆಸ್ಟರ್ಸ್‌ನಿಂದ ₹ 645 ಕೋಟಿ ಹೂಡಿಕೆ

ಪಿಟಿಐ
Published 29 ಸೆಪ್ಟೆಂಬರ್ 2020, 14:13 IST
Last Updated 29 ಸೆಪ್ಟೆಂಬರ್ 2020, 14:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಯುಟಿಐ ಆಸ್ತಿ ನಿರ್ವಹಣಾ ಕಂಪನಿಯು (ಎಎಂಸಿ) ಆರಂಭಿಕ ಷೇರು ಮಾರಾಟದ ಮೂಲಕ ಆ್ಯಂಕರ್‌ ಇನ್ವೆಸ್ಟರ್ಸ್‌ನಿಂದ ₹ 645 ಕೋಟಿ ಸಂಗ್ರಹಿಸಿದೆ.

ಸಾರ್ವಜನಿಕರಿಗೆ ಷೇರು ಖರೀದಿಯು ಮಂಗಳವಾರದಿಂದ ಆರಂಭವಾಗಿದ್ದು, ಅಕ್ಟೋಬರ್‌ 1ಕ್ಕೆ ಮುಗಿಯಲಿದೆ. 67 ಆ್ಯಂಕರ್‌ ಇನ್ವೆಸ್ಟರ್ಸ್‌ಗಳಿಗೆ 1.16 ಕೋಟಿ ಷೇರುಗಳನ್ನು ₹ 554ರ ಬೆಲೆಗೆ ಹಂಚಿಕೆ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.

ಐಸಿಐಸಿಐ ಪ್ರ್ಯುಡೆನ್ಶಿಯಲ್‌ ಮ್ಯೂಚುವಲ್‌ ಫಂಡ್‌ (ಎಂಎಫ್‌), ಎಚ್‌ಡಿಎಫ್‌ಸಿ ಎಂಎಫ್‌, ಆದಿತ್ಯ ಬಿರ್ಲಾ ಸನ್‌ಲೈಫ್‌ ಎಂಎಫ್‌, ಎಚ್‌ಡಿಎಫ್‌ಸಿ ಲೈಫ್‌ ಇನ್ಶೂರೆನ್ಸ್‌ ಕಂಪನಿ, ಮ್ಯಾಕ್ಸ್‌ ಲೈಫ್‌ ಇನ್ಶೂರೆನ್ಸ್‌ ಕಂಪನಿ ಲಿಮಿಟೆಡ್‌, ರಿಲಯನ್ಸ್‌ ಕ್ಯಾಪಿಟಲ್‌ ಟ್ರಸ್ಟಿ, ಮೋರ್ಗನ್‌ ಸ್ಟ್ಯಾನ್ಲಿ, ಎಚ್‌ಎಸ್‌ಬಿಸಿ, ಗೋಲ್ಡಮನ್‌ ಸ್ಯಾಚ್ಸ್‌ ಮತ್ತು ನೂಮುರಾ ಸಿಂಗಪುರ ಕಂಪನಿಗಳು ಆ್ಯಂಕರ್‌ ಇನ್ವೆಸ್ಟರ್‌ಗಳಾಗಿ ಷೇರು ಖರೀದಿಯಲ್ಲಿ ಭಾಗವಹಿಸಿದ್ದವು.

ADVERTISEMENT

ಹಾಲಿ ಇರುವ ಷೇರುದಾರರ 3.89 ಕೋಟಿ ಷೇರುಗಳನ್ನು (ಶೇ 30.75) ಐಪಿಒ ಮೂಲಕ ಮಾರಾಟಕ್ಕೆ ಇಟ್ಟಿದೆ. ಷೇರಿನ ಬೆಲೆ ₹ 552 ರಿಂದ ₹ 554ರಂತೆ ನಿಗದಿಪಡಿಸಿದೆ.

ಭಾರತೀಯ ಸ್ಟೇಟ್ ಬ್ಯಾಂಕ್‌, ಲೈಫ್‌ ಇನ್ಶೂರೆನ್ಸ್‌ ಕಾರ್ಪೊರೇಷನ್‌, ಬ್ಯಾಂಕ್‌ ಆಫ್‌ ಬರೋಡಾ ಕಂಪನಿಗಳು ತಲಾ 1.04 ಕೋಟಿ ಷೇರುಗಳನ್ನು ಮಾರಾಟಕ್ಕೆ ಇಟ್ಟಿವೆ. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಮತ್ತು ಟಿ ರೋವ್‌ ಪ್ರೈಸ್‌ ಇಂಟರ್‌ನ್ಯಾಷನಲ್‌ ತಲಾ 38 ಲಕ್ಷ ಷೇರುಗಳನ್ನು ಮಾರಾಟಕ್ಕೆ ಇಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.