ADVERTISEMENT

ವೇದಾಂತ ಸಮೂಹದ ಪುನರ್‌ರಚನೆಗೆ ಸಿದ್ಧತೆ

ಪಿಟಿಐ
Published 17 ನವೆಂಬರ್ 2021, 16:15 IST
Last Updated 17 ನವೆಂಬರ್ 2021, 16:15 IST

ನವದೆಹಲಿ: ಉದ್ಯಮಿ ಅನಿಲ್‌ ಅಗರ್ವಾಲ್‌ ಒಡೆತನದ ವೇದಾಂತ ಲಿಮಿಟೆಡ್‌ ಸಮೂಹವು ತನ್ನ ವಹಿವಾಟನ್ನು ಪುನರ್‌ರಚನೆ ಮಾಡುವುದಾಗಿ ಹೇಳಿದೆ. ಅದರ ಭಾಗವಾಗಿ ಅಲ್ಯುಮಿನಿಯಂ, ಕಬ್ಬಿಣ ಮತ್ತು ಉಕ್ಕು, ತೈಲ ಮತ್ತು ಅನಿಲಕ್ಕೆ ಸಂಬಂಧಿಸಿದ ವಹಿವಾಟುಗಳನ್ನು ಸಮೂಹದಿಂದ ಪ್ರತ್ಯೇಕಿಸಲಾಗುವುದು ಮತ್ತು ಷೇರುಪೇಟೆಯಲ್ಲಿ ಪ್ರತ್ಯೇಕವಾಗಿ ನೋಂದಾಯಿಸಲಾಗುವುದು ಎಂದು ಅದು ಹೇಳಿದೆ.

ವೇದಾಂತ ಲಿಮಿಟೆಡ್‌ ಮತ್ತು ಪ್ರತ್ಯೇಕ ಕಂಪನಿಗಳಾಗಲಿರುವ ಮೂರು ಕಂಪನಿಗಳು ಸಮಾನಾಂತರವಾಗಿ ಕಾರ್ಯಾಚರಿಸಲಿವೆ ಎಂದು ಸಮೂಹದ ಅಧ್ಯಕ್ಷ ಅಗರ್ವಾಲ್‌ ತಿಳಿಸಿದ್ದಾರೆ.

ಈ ಮೂರು ಉದ್ದಿಮೆಗಳು ಬೆಳವಣಿಗೆ ಸಾಧಿಸುವ ಉತ್ತಮ ಸಾಮರ್ಥ್ಯ ಹೊಂದಿವೆ. ಈ ಮಾದರಿಯು ಬೆಳವಣಿಗೆಗೆ ಸಹಜವಾದ ಮಾರ್ಗ ನೀಡುವ ಜೊತೆಗೆ ಷೇರುದಾರರ ಮೌಲ್ಯವನ್ನೂ ಹೆಚ್ಚಿಸಲಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಸಮೂಹದ ಪುನರ್‌ ರಚನೆಗೆ ಇರುವ ಆಯ್ಕೆಗಳ ಪರಿಶೀಲನೆ ನಡೆಸಲು ಮತ್ತು ಆ ಕುರಿತು ಶಿಫಾರಸು ಮಾಡಲು ವೇದಾಂತ ಮಂಡಳಿಯು ನಿರ್ದೇಶಕರ ಸಮಿತಿಯೊಂದನ್ನು ರಚಿಸಿದೆ ಎಂದು ಅಗರ್ವಾಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.