ADVERTISEMENT

ವಿಜಯ ಬ್ಯಾಂಕ್‌ ಷೇರುದಾರರ ಸಭೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2018, 19:12 IST
Last Updated 29 ಜೂನ್ 2018, 19:12 IST
ಜಿ. ನಾರಾಯಣನ್‌ ಅವರ ಅಧ್ಯಕ್ಷತೆಯಲ್ಲಿ ವಿಜಯ ಬ್ಯಾಂಕ್‌ನ ಷೇರುದಾರರ ವಾರ್ಷಿಕ ಸಭೆ ಶುಕ್ರವಾರ ಬೆಂಗಳೂರಿನಲ್ಲಿ ನಡೆಯಿತು
ಜಿ. ನಾರಾಯಣನ್‌ ಅವರ ಅಧ್ಯಕ್ಷತೆಯಲ್ಲಿ ವಿಜಯ ಬ್ಯಾಂಕ್‌ನ ಷೇರುದಾರರ ವಾರ್ಷಿಕ ಸಭೆ ಶುಕ್ರವಾರ ಬೆಂಗಳೂರಿನಲ್ಲಿ ನಡೆಯಿತು   

ಬೆಂಗಳೂರು: ವಿಜಯ ಬ್ಯಾಂಕ್‌ನ ಷೇರುದಾರರ 18ನೇ ವಾರ್ಷಿಕ ಸಾಮಾನ್ಯ ಸಭೆಯು ಶುಕ್ರವಾರ ಇಲ್ಲಿ ಜರುಗಿತು.

‘ಹಲವಾರು ಸವಾಲುಗಳ ಮಧ್ಯೆಯೂ ಬ್ಯಾಂಕ್‌, 2017–18ರಲ್ಲಿ ಅತ್ಯುತ್ತಮ ಹಣಕಾಸು ಸಾಧನೆ ಮಾಡಿದೆ. ತಲಾ ₹ 10 ಮುಖಬೆಲೆಯ ಪ್ರತಿ ಷೇರಿಗೆ ಬ್ಯಾಂಕ್‌ ₹ 1.20ರಂತೆ ಲಾಭಾಂಶ ಘೋಷಿಸಿದೆ’ ಎಂದು ಬ್ಯಾಂಕ್‌ನ ಅಧ್ಯಕ್ಷ ಜಿ. ನಾರಾಯಣನ್‌ ಹೇಳಿದರು.

‘ಈ ವರ್ಷದ ಮಾರ್ಚ್ ಅಂತ್ಯಕ್ಕೆ ಬ್ಯಾಂಕ್‌ ಒಟ್ಟಾರೆ ₹ 2.75 ಲಕ್ಷ ಕೋಟಿಗಳಷ್ಟು ವಹಿವಾಟು ನಡೆಸಿದೆ. ₹ 727 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷ 107 ಹೊಸ ಶಾಖೆಗಳನ್ನು ತೆರೆಯಲಾಗಿದ್ದು, ಶಾಖೆಗಳ ಸಂಖ್ಯೆ ಈಗ 2,136ಕ್ಕೆ ಏರಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.