ADVERTISEMENT

ಇನ್ಫೊಸಿಸ್ ಮಾಜಿ ಸಿಇಒ ವಿಶಾಲ್ ಸಿಕ್ಕಾ ಒರಾಕಲ್‌ ಆಡಳಿತ ಮಂಡಳಿಗೆ

ಪಿಟಿಐ
Published 10 ಡಿಸೆಂಬರ್ 2019, 5:22 IST
Last Updated 10 ಡಿಸೆಂಬರ್ 2019, 5:22 IST
ವಿಶಾಲ್ ಸಿಕ್ಕಾ
ವಿಶಾಲ್ ಸಿಕ್ಕಾ   

ವಾಷಿಂಗ್ಟನ್‌:ಇನ್ಫೊಸಿಸ್‌ಮಾಜಿ ಸಿಇಒ ವಿಶಾಲ್‌ ಸಿಕ್ಕಾ ಇದೀಗ ಸಾಫ್ಟವೇರ್‌ ಜಗತ್ತಿನ ಬೃಹತ್‌ ಸಂಸ್ಥೆ ಒರಾಕಲ್‌ನ ಆಡಳಿತ ಮಂಡಳಿಗೆ ನಾಮನಿರ್ದೇಶನಗೊಂಡಿದ್ದಾರೆ.

‘ಕೃತಕ ಬುದ್ಧಿಮತ್ತೆ ಮತ್ತು ಮಶೀನ್‌ ಲರ್ನಿಂಗ್‌ನಲ್ಲಿ ವಿಶ್ವದ ಮುಂಚೂಣಿ ತಜ್ಞರಾಗಿರುವಸಿಕ್ಕಾ ಮುಂದಿನ ದಿನಗಳಲ್ಲಿ ಒರಾಕಲ್‌ನ ಬದಲಾವಣೆ ಮತ್ತುಅಭಿವೃದ್ಧಿಗೆ ಕೈಜೋಡಿಸಲಿದ್ದಾರೆ ಎಂದು ಕಂಪನಿಯ ಹೇಳಿಕೆ ತಿಳಿಸಿದೆ.

ವೈನೈ (Vianai) ಆರಂಭಿಸುವ ಮೊದಲು ಸಿಕ್ಕಾ ಅವರುಸ್ಯಾಪ್‌ (SAP) ಸಂಸ್ಥೆಯಲ್ಲಿ ಉನ್ನತ ಸ್ಥಾನದಲ್ಲಿದ್ದರು. ಇನ್ಫೊಸಿಸ್‌ಸಿಇಒ ಆಗಿದ್ದರು.

ADVERTISEMENT

‘ಇಂದು ಜಗತ್ತಿನಲ್ಲಿ ಎಂಟರ್‌ಪ್ರೈಸ್‌ಅಪ್ಲಿಕೇಶನ್ ಸೂಟ್ಸ್‌ ಮತ್ತು ಸೆಕ್ಯುರ್‌ ಇನ್‌ಫ್ರಾಸ್ಟ್ರಕ್ಚರ್‌ಗಳನ್ನುಬೆಸೆದು ಒಂದೇ ಆಗಿಸಿ ಒದಗಿಸುತ್ತಿರುವಜಗತ್ತಿನ ಮುಂಚೂಣಿ ನಾಲ್ಕು ಕಂಪನಿಗಳ ಪೈಕಿಒರಾಕಲ್‌ ಸಹ ಒಂದು. ಮುಂಬರುವ ದಿನಗಳಲ್ಲಿ ಕಂಪನಿಯ ಭವಿಷ್ಯ ಉಜ್ವಲವಾಗಿದೆ’ ಎಂದು ಸಿಕ್ಕಾ ತಮ್ಮ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ.

‘ಒರಾಕಲ್‌ ಆಡಳಿತ ಮಂಡಳಿಯ ಭಾಗವಾಗಲು ಮತ್ತು ಅದರ ಯಶಸ್ಸಿನ ಪಯಣದಲ್ಲಿ ಭಾಗಿಯಾಗಲು ಖುಷಿಯಾಗುತ್ತಿದೆ’ ಎಂದು ಸಿಕ್ಕಾ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.