ADVERTISEMENT

ಅಂಧರಿಗೆ ಕರೆನ್ಸಿ ಗುರುತಿಸಲು ‘MANI’ ಆ್ಯಪ್‌

ಪಿಟಿಐ
Published 1 ಜನವರಿ 2020, 20:00 IST
Last Updated 1 ಜನವರಿ 2020, 20:00 IST
   

ಮುಂಬೈ: ಅಂಧರು ಕರೆನ್ಸಿ ನೋಟುಗಳನ್ನು ಸುಲಭವಾಗಿ ಗುರುತಿಸಲು ನೆರವಾಗುವ ಮೊಬೈಲ್‌ ಆ್ಯಪ್‌ ‘MANI’ ಅನ್ನು ಆರ್‌ಬಿಐ ಬುಧವಾರ ಬಿಡುಗಡೆ ಮಾಡಿದೆ.

ಅಂತರ್ಜಾಲದ ಸಂಪರ್ಕ ಇಲ್ಲದೇ ಇರುವಾಗಲೂ ಇದು ಕರೆನ್ಸಿ ನೋಟುಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿದೆ ಎಂದು ಆರ್‌ಬಿಐ ತಿಳಿಸಿದೆ. ಆದರೆ, ನೋಟು ಅಸಲಿಯೇ ಅಥವಾ ನಕಲಿಯೇ ಎಂದು ಗುರುತಿಸುವ ಸಾಮರ್ಥ್ಯ ಇಲ್ಲ ಎಂದು ಹೇಳಿದೆ.

ಮೊಬೈಲ್‌ ಕ್ಯಾಮೆರಾ ಎದುರು ಇಡುವ ನೋಟಿನ ಚಿತ್ರವನ್ನು ಸೆರೆಹಿಡಿದು ಧ್ವನಿಯ ಮೂಲಕ ಯಾವ ಮುಖಬೆಲೆಯ ಕರೆನ್ಸಿ ಎನ್ನುವುದನ್ನು ಇಂಗ್ಲಿಷ್‌ ಮತ್ತು ಹಿಂದಿ ಭಾಷೆಯಲ್ಲಿ ತಿಳಿಸಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.