ADVERTISEMENT

ಇಂಡಸ್‌ ಟವರ್ಸ್‌–ಭಾರ್ತಿ ಇನ್‌ಫ್ರಾಟೆಲ್‌ ವಿಲೀನಕ್ಕೆ ಒಪ್ಪಿಗೆ

ಪಿಟಿಐ
Published 5 ಅಕ್ಟೋಬರ್ 2020, 14:22 IST
Last Updated 5 ಅಕ್ಟೋಬರ್ 2020, 14:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಇಂಡಸ್‌ ಟವರ್ಸ್‌ ಅನ್ನು ಭಾರ್ತಿ ಇನ್‌ಫ್ರಾಟೆಲ್‌ ಕಂಪನಿಯೊಂದಿಗೆ ವಿಲೀನಗೊಳಿಸಲು ಸಾಲ ನೀಡಿರುವ ಸಂಸ್ಥೆಗಳು ಒಪ್ಪಿಗೆ ನೀಡಿವೆ ಎಂದು ವೊಡಾಫೋನ್‌ ಸಮೂಹವು ಸೋಮವಾರ ತಿಳಿಸಿದೆ.

ಇಂಡಸ್‌ ಟವರ್ಸ್‌ ಲಿಮಿಟೆಡ್‌ ಮತ್ತು ಭಾರ್ತಿ ಇನ್‌ಫ್ರಾಟೆಲ್‌ ಲಿಮಿಟೆಡ್‌ ಅನ್ನು ವಿಲೀನಗೊಳಿಸಲು ಒಪ್ಪಿಗೆ ನೀಡಿರುವುದಾಗಿ ವೊಡಾಫೋನ್‌ ಗ್ರೂಪ್‌ ಪಿಎಲ್‌ಸಿ ಸೆಪ್ಟೆಂಬರ್‌ 1ರಂದು ಘೋಷಿಸಿತ್ತು.

ವಿಲೀನ ಯೋಜನೆಯನ್ನು ಜಾರಿಗೊಳಿಸುವ ಸಂಬಂಧ ಕಂಪನಿಗಳು ರಾಷ್ಟ್ರೀಯ ಕಂಪನಿ ಕಾಯ್ದೆ ಪ್ರಾಧಿಕಾರದ ಒಪ್ಪಿಗೆ ಕೇಳಿವೆ.

ADVERTISEMENT

ವಿಲೀನದ ಬಳಿಕ ಅಸ್ತಿತ್ವಕ್ಕೆ ಬರಲಿರುವ ಕಂಪನಿಯು ಚೀನಾದಾಚೆಗೆ ವಿಶ್ವದಲ್ಲಿಯೇ ಅತಿದೊಡ್ಡ ಟವರ್‌ ಕಂಪನಿಯಾಗಿ ಹೊರಹೊಮ್ಮಲಿದೆ.ಹೊಸ ಕಂಪನಿಯು 22 ದೂರಸಂಪರ್ಕ ಸೇವಾ ‍ಪ್ರದೇಶಗಳಲ್ಲಿ ಕಾರ್ಯಚರಣೆ ನಡೆಸಲಿದ್ದು, ಒಟ್ಟು ಟವರ್‌ಗಳ ಸಂಖ್ಯೆ 1.63 ಲಕ್ಷ ಇರಲಿದೆ.

ನಷ್ಟದಲ್ಲಿರುವ ವೊಡಾಫೋನ್‌ ಐಡಿಯಾ ಮತ್ತು ಭಾರ್ತಿ ಕಂಪನಿಗಳಿಗೆ ಈ ವಿಲೀನವು ಹೆಚ್ಚು ಪ್ರಯೋಜನಕಾರಿಯಾಗಲಿದೆ. ಭಾರ್ತಿ ಏರ್‌ಟೆಲ್‌ ಮತ್ತು ವೊಡಾಫೋನ್‌ ಐಡಿಯಾ ಕಂಪನಿಗಳು ಇಂಡಸ್‌ ಟವರ್ಸ್‌ನಲ್ಲಿ ಹೊಂದಿರುವ ಷೇರುಗಳನ್ನು ಮಾರಾಟ ಮಾಡುವ ಮೂಲಕ ಬಂಡವಾಳ ಸಂಗ್ರಹಿಸಲು ಅನುಕೂಲ ಆಗಲಿದೆ. ವೊಡಾಫೋನ್ ಐಡಿಯಾ ಕಂಪನಿಯು ಇಂಡಸ್‌ ಟವರ್ಸ್‌ನಲ್ಲಿ ಶೇ 11.15ರಷ್ಟು ಷೇರುಪಾಲು ಹೊಂದಿದ್ದು, ಇದರ ಅಂದಾಜು ಮೌಲ್ಯ ₹ 4 ಸಾವಿರ ಕೋಟಿಗಳಷ್ಟಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.