ADVERTISEMENT

ಸಗಟು ಹಣದುಬ್ಬರ ಇಳಿಕೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 16:38 IST
Last Updated 14 ಮಾರ್ಚ್ 2024, 16:38 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಆಹಾರ ಪದಾರ್ಥಗಳ ದರ ಏರಿಕೆಯ ನಡುವೆಯೂ ಫೆಬ್ರುವರಿಯಲ್ಲಿ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು ಶೇ 0.20ರಷ್ಟಕ್ಕೆ ಇಳಿಕೆಯಾಗಿದೆ.

ಜನವರಿಯಲ್ಲಿ ಶೇ 0.27ರಷ್ಟಿದ್ದ ಹಣದುಬ್ಬರವು, ಫೆಬ್ರುವರಿಯಲ್ಲಿ ಶೇ 0.20ರಷ್ಟು ಆಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.

ಆದರೆ ಜನವರಿಗೆ ಹೋಲಿಸಿದರೆ ಫೆಬ್ರುವರಿಯಲ್ಲಿ ಆಹಾರದ ಹಣದುಬ್ಬರವು ಶೇ6.85ರಿಂದ ಶೇ 6.95ಕ್ಕೆ, ತರಕಾರಿಗಳ ದರವು ಶೇ 19.71ರಿಂದ ಶೇ 19.78ಕ್ಕೆ ಮತ್ತು ಬೇಳೆಕಾಳುಗಳ ದರವು ಶೇ 16.06ರಿಂದ ಶೇ 18.48ಕ್ಕೆ ಏರಿಕೆಯಾಗಿದೆ. ತಯಾರಿಕಾ ಉತ್ಪನ್ನಗಳ ಬೆಲೆಯು ಶೇ 1.13ರಿಂದ ಶೇ 1.27ಕ್ಕೆ ಇಳಿಕೆಯಾಗಿದೆ.

ADVERTISEMENT

2023ರ ಫೆಬ್ರುವರಿಯಲ್ಲಿ ಸಗಟು ಹಣದುಬ್ಬರವು ಶೇ 3.85ರಷ್ಟಿತ್ತು. ಬಳಿಕ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಋಣಾತ್ಮಕ ವಲಯದಲ್ಲಿದ್ದ ಹಣದುಬ್ಬರವು ನವೆಂಬರ್‌ನಲ್ಲಿ ಶೇ 0.26ಕ್ಕೆ ಏರಿಕೆ ಆಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.