ADVERTISEMENT

‘ಸರ್ಕಾರಿ ಕಂಪನಿಗಳ ಶೇ 96ರಷ್ಟು ಎಜಿಆರ್‌ ಬಾಕಿ ಕೈಬಿಡಲು ಸಿದ್ಧ’

ಪಿಟಿಐ
Published 18 ಜೂನ್ 2020, 22:25 IST
Last Updated 18 ಜೂನ್ 2020, 22:25 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಸರ್ಕಾರಿ ಕಂಪನಿಗಳು ನೀಡ ಬೇಕಿರುವ ಹೊಂದಾಣಿಕೆ ಮಾಡಿದ ಒಟ್ಟು ವರಮಾನದ (ಎಜಿಆರ್‌) ಬಾಕಿ ಮೊತ್ತದಲ್ಲಿ ಶೇ 98ರಷ್ಟನ್ನು ಕೈಬಿಡಲು ನಿರ್ಧರಿಸಿರುವುದಾಗಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಗುರುವಾರ ತಿಳಿಸಿದೆ.

ಗೇಲ್‌, ಪವರ್‌ ಗ್ರಿಡ್‌, ಆಯಿಲ್‌ ಇಂಡಿಯಾ, ದೆಹಲಿ ಮೆಟ್ರೊ ಒಳ ಗೊಂಡು ಸರ್ಕಾರಿ ಸ್ವಾಮ್ಯದ ಕಂಪನಿಗಳ ಒಟ್ಟಾರೆಎಜಿಆರ್‌ ಬಾಕಿ ₹ 4 ಲಕ್ಷ ಕೋಟಿ ಇದ್ದು, ಅದರಲ್ಲಿ ಶೇ 96ರಷ್ಟು ಕೈಬಿಡಲು ದೂರಸಂಪರ್ಕ ಇಲಾಖೆ ನಿರ್ಧರಿಸಿದೆ ಎಂದು ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆದ ವಿಚಾರಣೆಯ ವೇಳೆ ಹೇಳಿದೆ.

ದೂರಸಂಪರ್ಕವು ಮುಖ್ಯ ವಹಿವಾಟು ಅಲ್ಲ. ಪರವಾನಗಿಯಿಂದ ಬರುವ ವರಮಾನವು ಅತ್ಯಲ್ಪ ಎಂದು ಹೇಳಿ, ಬಾಕಿ ಪಾವತಿಸುವ ಕುರಿತ ದೂರಸಂಪರ್ಕ ಇಲಾಖೆಯ ನಿರ್ಧಾರವನ್ನು ಈ ಕಂಪನಿಗಳು ಕೋರ್ಟ್‌ನಲ್ಲಿ ಮರುಪ್ರಶ್ನಿಸಿದ್ದವು.

ADVERTISEMENT

ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ನೀಡಿರುವ ಆದೇಶವನ್ನು ಮರುಪರಿ ಶೀಲಿಸುವಂತೆ ಸುಪ್ರೀಂ ಕೋರ್ಟ್ ಜೂನ್‌ 11ರಂದು ಕೇಂದ್ರ
ಸರ್ಕಾರಕ್ಕೆ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.