ADVERTISEMENT

ವಿಪ್ರೊ ಸಿಇಒ ರಾಜೀನಾಮೆ

ಪಿಟಿಐ
Published 6 ಏಪ್ರಿಲ್ 2024, 16:14 IST
Last Updated 6 ಏಪ್ರಿಲ್ 2024, 16:14 IST
......
......   

ನವದೆಹಲಿ: ದೇಶದ ಪ್ರಮುಖ ಐ.ಟಿ. ಕಂಪನಿ ವಿಪ್ರೊ ಲಿಮಿಟೆಡ್‌ನ ಸಿಇಒ ಥಿಯರಿ ಡೆಲಾಪೋರ್ಟ್ ಅವರು, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಹೊಸ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಆಗಿ ಶ್ರೀನಿವಾಸ್‌ ಪಲ್ಲಿಯಾ ನೇಮಕವಾಗಿದ್ದು, ಭಾನುವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಡೆಲಾಪೋರ್ಟ್‌ ಅವರನ್ನು ಮೇ 31ರಂದು ಕಂಪನಿಯ ಉದ್ಯೋಗದಿಂದ ಮುಕ್ತಗೊಳಿಸಲಾಗುವುದು ಎಂದು ವಿಪ್ರೊ ತಿಳಿಸಿದೆ.

ಆಡಳಿತ ಮಂಡಳಿಯ ಸಭೆಯು ಶ್ರೀನಿವಾಸ್‌ ಅವರ ನೇಮಕಕ್ಕೆ ಒಪ್ಪಿಗೆ ನೀಡಿದೆ. ಮುಂದಿನ ಐದು ವರ್ಷಗಳ ಕಾಲ ಈ ಹುದ್ದೆಯಲ್ಲಿ ಅವರು ಕಾರ್ಯ ನಿರ್ವಹಿಸಲಿದ್ದಾರೆ. ಸಭೆಯ ನಿರ್ಧಾರವು ಷೇರುದಾರರು ಮತ್ತು ಕೇಂದ್ರ ಸರ್ಕಾರದ ಅನುಮೋದನೆಗೆ ಒಳಪಟ್ಟಿದೆ ಎಂದು ಕಂಪನಿಯು, ಷೇರುಪೇಟೆಗೆ ಮಾಹಿತಿ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.