ನವದೆಹಲಿ: ದೇಶದ ನಾಲ್ಕನೆಯ ಅತಿದೊಡ್ಡ ಐ.ಟಿ. ಸೇವಾ ಕಂಪನಿ ವಿಪ್ರೊ ಗುರುವಾರ ತನ್ನ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದ್ದು, ನಿವ್ವಳ ಲಾಭದ ಪ್ರಮಾಣವು ಶೇ 9.8ರಷ್ಟು ಹೆಚ್ಚಾಗಿದೆ.
ಜೂನ್ ತ್ರೈಮಾಸಿಕದಲ್ಲಿ ಕಂಪನಿಯು ₹3,336 ಕೋಟಿ ಲಾಭ ಗಳಿಸಿದೆ. ಅಲ್ಲದೆ, ಕಂಪನಿಯ ಕಾರ್ಯಾಚರಣೆ ವರಮಾನ ಕೂಡ ತುಸು ಹೆಚ್ಚಾಗಿದ್ದು ₹22,134 ಕೋಟಿಗೆ ತಲುಪಿದೆ.
ಆದರೆ, ಮಾರ್ಚ್‌ಗೆ ಕೊನೆಗೊಂಡ ತ್ರೈಮಾಸಿಕಕ್ಕೆ ಹೋಲಿಸಿದರೆ ಕಂಪನಿಯ ನಿವ್ವಳ ಲಾಭ ಮತ್ತು ವರಮಾನ ಕ್ರಮವಾಗಿ ಶೇ 7ರಷ್ಟು ಹಾಗೂ ಶೇ 1.6ರಷ್ಟು ಕಡಿಮೆ ಆಗಿದೆ.
ಕಂಪನಿಯು ತನ್ನ ಷೇರುದಾರರಿಗೆ ಮಧ್ಯಂತರ ಲಾಭಾಂಶದ ರೂಪದಲ್ಲಿ ಪ್ರತಿ ಷೇರಿಗೆ ₹5 ನೀಡಲಿದೆ. ಈ ಮೊತ್ತವು ಆಗಸ್ಟ್ 15ರಂದು ಅಥವಾ ಅದಕ್ಕೂ ಮೊದಲು ಪಾವತಿ ಆಗಲಿದೆ.
ಕಂಪನಿಯು ವರ್ಷಕ್ಕೆ ಎರಡು ಬಾರಿ ಲಾಭಾಂಶ ನೀಡಲು ಯತ್ನಿಸಲಿದೆ ಎಂದು ಮುಖ್ಯ ಹಣಕಾಸು ಅಧಿಕಾರಿ ಅಪರ್ಣಾ ಅಯ್ಯರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.