ನವದೆಹಲಿ: ಐ.ಟಿ. ಸೇವಾ ಕಂಪನಿ ವಿಪ್ರೊ ತನ್ನ ಕಿರಿಯ ಶ್ರೇಣಿಯ ಉದ್ಯೋಗಿಗಳಿಗೆ ಸೆಪ್ಟೆಂಬರ್ 1ರಿಂದ ಜಾರಿಗೆ ಬರುವಂತೆ ವೇತನ ಹೆಚ್ಚಿಸಲಿದೆ.
‘ಸಹಾಯಕ ವ್ಯವಸ್ಥಾಪಕ ಹಾಗೂ ಅದಕ್ಕಿಂತ ಕಿರಿಯ ಹುದ್ದೆಗಳಲ್ಲಿ ಇರುವವರಿಗೆ ಮೆರಿಟ್ ಆಧಾರದಲ್ಲಿ ವೇತನ ಹೆಚ್ಚಳ ಆಗಲಿದೆ. ಈ ಶ್ರೇಣಿಯಲ್ಲಿನ ಅರ್ಹರಿಗೆ ಜನವರಿಯಲ್ಲಿ ಕೂಡ ವೇತನ ಹೆಚ್ಚಿಸಲಾಗಿತ್ತು. ಸೆಪ್ಟೆಂಬರ್ 1ರಿಂದ ಜಾರಿಗೆ ಬರಲಿರುವುದು ಈ ಕ್ಯಾಲೆಂಡರ್ ವರ್ಷದಲ್ಲಿನ ಎರಡನೆಯ ವೇತನ ಹೆಚ್ಚಳ’ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.