ADVERTISEMENT

ಐಪಿಒ: ಸೆಬಿಗೆ ದಾಖಲೆ ಪತ್ರ ಸಲ್ಲಿಸಿದ ಯಾತ್ರಾ ಆನ್‌ಲೈನ್‌

ಪಿಟಿಐ
Published 26 ಮಾರ್ಚ್ 2022, 11:42 IST
Last Updated 26 ಮಾರ್ಚ್ 2022, 11:42 IST

ನವದೆಹಲಿ: ಪ್ರಯಾಣ ಸೇವೆಗಳನ್ನು ಒದಗಿಸುವ ಯಾತ್ರಾ ಆನ್‌ಲೈನ್‌ ಲಿಮಿಟೆಡ್‌ ಐಪಿಒ ಮೂಲಕ ₹ 750 ಕೋಟಿ ಬಂಡವಾಳ ಸಂಗ್ರಹಿಸಲು ಮುಂದಾಗಿದೆ. ಇದಕ್ಕಾಗಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಕರಡು ದಾಖಲೆಪತ್ರಗಳನ್ನು ಸಲ್ಲಿಸಿರುವುದಾಗಿ ಹೇಳಿದೆ.

ಐಪಿಒದಲ್ಲಿ 93.28 ಲಕ್ಷ ಈಕ್ವಿಟಿ ಷೇರುಗಳ ಒಎಫ್‌ಎಸ್‌ ಸಹ ಸೇರಿಕೊಂಡಿದೆ.

ಐಪಿಒ ಮೂಲಕ ಸಂಗ್ರಹ ಆಗಲಿರುವ ಮೊತ್ತವನ್ನು ಹೂಡಿಕೆ, ಸ್ವಾಧೀನ, ಕಂಪನಿಯ ಬೆಳವಣಿಗೆ ಮತ್ತು ಇನ್ನಿತರ ಕಾರ್ಪೊರೇಟ್‌ ಉದ್ದೇಶಗಳಿಗೆ ಬಳಸಿಕೊಳ್ಳುವುದಾಗಿ ಕರಡು ದಾಖಲೆ ಪತ್ರದಲ್ಲಿ ತಿಳಿಸಲಾಗಿದೆ.

ADVERTISEMENT

ಎಸ್‌ಬಿಐ ಕ್ಯಾಪಿಟಲ್‌ ಮಾರ್ಕೆಟ್ಸ್‌ ಲಿಮಿಟೆಡ್‌, ಡಿಎಎಂ ಕ್ಯಾಪಿಟಲ್‌ ಅಡ್ವೈಸರ್ಸ್‌ ಲಿಮಿಟೆಡ್‌ ಮತ್ತು ಐಐಎಫ್‌ಎಲ್‌ ಸೆಕ್ಯುರಿಟೀಸ್‌ ಲಿಮಿಟೆಡ್‌ ಕಂಪನಿಗಳು ಐಪಿಒ ನಿರ್ವಹಣೆ ಮಾಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.