ಮುಂಬೈ:ಯೆಸ್ ಬ್ಯಾಂಕ್ ಮೇಲಿನ ನಿರ್ಬಂಧ ಬುಧವಾರ ಸಂಜೆ 6 ಗಂಟೆಗೆ ಅಂತ್ಯಗೊಂಡಿದ್ದು, ಬ್ಯಾಂಕ್‌ನ ಕಾರ್ಡ್ ಮತ್ತು ಡಿಜಿಟಲ್ ಸೇವೆಗಳು ಗ್ರಾಹಕರ ಬಳಕೆಗೆ ಮುಕ್ತವಾಗಿವೆ. ಗುರುವಾರದಿಂದ ಎಲ್ಲ ಶಾಖೆಗಳು ಕಾರ್ಯಾರಂಭ ಮಾಡಲಿವೆ.
ಬ್ಯಾಂಕ್‌ನ ಪೂರ್ಣ ಪ್ರಮಾಣದ ಸೇವೆಗಳನ್ನು ನಮ್ಮ ಗ್ರಾಹಕರು ಇನ್ನು ಮುಂದೆ ಬಳಸಿಕೊಳ್ಳಬಹುದು. ನಿಮ್ಮ ಸಂಯಮ ಮತ್ತು ಸಹಕಾರಕ್ಕೆ ಧನ್ಯವಾದ ಎಂದು ಬ್ಯಾಂಕ್ ಪರವಾಗಿ ಟ್ವೀಟ್ ಮಾಡಲಾಗಿದೆ.
ಒಂದು ಹಂತದಲ್ಲಿ ₹ 87.95ಕ್ಕೆ ಏರಿದ್ದ ಬ್ಯಾಂಕ್‌ನ ಪ್ರತಿ ಷೇರಿನ ಬೆಲೆ ನಂತರ ಲಾಭಗಳಿಕೆಯ ಒತ್ತಡಕ್ಕೆ ಸಿಲುಕಿ ದಿನದ ಅಂತ್ಯಕ್ಕೆ
₹ 60.80ಕ್ಕೆ ತಲುಪಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.