ADVERTISEMENT

ಜೆರೊದಾದಿಂದ ಶೀಘ್ರವೇ ಎಎಂಸಿ ಆರಂಭ?

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2021, 15:39 IST
Last Updated 1 ಸೆಪ್ಟೆಂಬರ್ 2021, 15:39 IST
ಮ್ಯೂಚುವಲ್‌ ಫಂಡ್‌
ಮ್ಯೂಚುವಲ್‌ ಫಂಡ್‌   

ಬೆಂಗಳೂರು: ಜನಪ್ರಿಯ ಷೇರು ಬ್ರೋಕರೇಜ್ ಕಂಪನಿಯಾಗಿರುವ ಜೆರೊದಾ ಶೀಘ್ರದಲ್ಲಿಯೇ ಮ್ಯೂಚುವಲ್‌ ಫಂಡ್‌ ವಹಿವಾಟುಗಳಿಗೂ ಲಗ್ಗೆ ಇಡುವ ಸಾಧ್ಯತೆ ಇದೆ. ತನ್ನದೇ ಆದ ಆಸ್ತಿ ನಿರ್ವಹಣಾ ಕಂಪನಿ (ಎಎಂಸಿ) ಆರಂಭಿಸಲು ‘ಜೆರೊದಾ’ಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಅನುಮತಿ ನೀಡಿದೆ.

‘ಎಎಂಸಿ (ಮ್ಯೂಚುವಲ್‌ ಫಂಡ್‌) ಪರವಾನಗಿ ಕೋರಿದ್ದಕ್ಕೆ ನಮಗೆ ತಾತ್ವಿಕ ಒಪ್ಪಿಗೆ ದೊರೆತಿದೆ. ಇನ್ನು ಮುಂದೆ ಕಠಿಣ ಕೆಲಸವಿದೆ’ ಎಂದು ಜೆರೊದಾ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ನಿತಿನ್ ಕಾಮತ್ ಅವರು ಬುಧವಾರ ಟ್ವೀಟ್ ಮಾಡಿದ್ದಾರೆ.

‘ಬಂಡವಾಳ ಮಾರುಕಟ್ಟೆಯಲ್ಲಿನ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು, ಈಗ ಹೂಡಿಕೆ ಮಾಡುತ್ತಿಲ್ಲದವರನ್ನು ತಲುಪಲು ಮ್ಯೂಚುವಲ್‌ ಫಂಡ್‌ಗಳನ್ನು ಮರುರೂಪಿಸಬೇಕಿದೆ ಎಂಬುದು ನಮ್ಮ ಅನಿಸಿಕೆ. ಹಾಗಾಗಿ, ನಾವು ಆಸ್ತಿ ನಿರ್ವಹಣಾ ಕಂಪನಿ (ಮ್ಯೂಚುವಲ್‌ ಫಂಡ್‌) ಆರಂಭಿಸಲು ಅರ್ಜಿ ಸಲ್ಲಿಸಿದ್ದೇವೆ’ ಎಂದು ಕಾಮತ್ ಅವರು ಈ ಹಿಂದೆ ಹೇಳಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.