ADVERTISEMENT

ಯೂನಿಮ್ಯಾಕ್ಟ್ಸ್‌ ಸ್ವಾಧೀನಕ್ಕೆ ತೆಗೆದುಕೊಂಡ ಜೆಟ್‌ವರ್ಕ್‌

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 18:42 IST
Last Updated 2 ಡಿಸೆಂಬರ್ 2022, 18:42 IST

ಬೆಂಗಳೂರು: ಜೆಟ್‌ವರ್ಕ್‌ ಮ್ಯಾನುಫ್ಯಾಕ್ಚರಿಂಗ್ ಕಂಪನಿಯು, ತಯಾರಿಕಾ ಸೇವೆಗಳನ್ನು ಒದಗಿಸುವ ಯೂನಿಮ್ಯಾಕ್ಟ್ಸ್‌ ಕಂಪನಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡಿರುವುದಾಗಿ ಹೇಳಿದೆ.

ಈ ಸ್ವಾಧೀನದಿಂದಾಗಿ ತನಗೆ ವಹಿವಾಟುಗಳನ್ನು ವಿಸ್ತರಿಸಿಕೊಳ್ಳಲು ಹಾಗೂ ತನ್ನ ಗ್ರಾಹಕರಿಗೆ ತಕ್ಷಣಕ್ಕೆ ಸೇವೆಗಳನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದು ಜೆಟ್‌ವರ್ಕ್‌ ಹೇಳಿದೆ. ಯೂನಿಮ್ಯಾಕ್ಟ್ಸ್‌ ಕಂಪನಿ ನವೀಕರಿಸಬಹುದಾದ ಇಂಧನ ಉತ್ಪಾದನಾ ವಲಯದಲ್ಲಿ ಹೊಂದಿರುವ ಅನುಭವದ ಪ್ರಯೋಜನ ತನಗೆ ಸಿಗಲಿದೆ ಎಂದು ಅದು ಹೇಳಿದೆ.

‘ತಯಾರಿಕಾ ವಲಯದಲ್ಲಿ ನಾಯಕತ್ವದ ಸ್ಥಾನಕ್ಕೆ ಬರಬೇಕು ಎಂಬ ನಮ್ಮ ಬಯಕೆಗೆ ಈ ಸ್ವಾಧೀನವು ಪೂರಕವಾಗಿದೆ’ ಎಂದು ಜೆಟ್‌ವರ್ಕ್‌ನ ಸಿಇಒ ಅಮೃತ್ ಆಚಾರ್ಯ ಹೇಳಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.