ADVERTISEMENT

ರೂಪಾಯಿ ಭೀತಿ,ಜಿಡಿಪಿ ಒತ್ತಡ

ಕೆ.ಜಿ ಕೃಪಾಲ್
Published 3 ಜೂನ್ 2012, 19:30 IST
Last Updated 3 ಜೂನ್ 2012, 19:30 IST

ಕಳೆದ ವಾರ ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕವು ಭಾರಿ ಮಾರಾಟದ ಒತ್ತಡ ಎದುರಿಸಿ ಒಟ್ಟು 252 ಅಂಶಗಳಷ್ಟು ಹಾನಿ ಅನುಭವಿಸಿತು. ವಾರಾಂತ್ಯದಲ್ಲಿ ಸೂಚ್ಯಂಕವು 16 ಸಾವಿರದ ಗಡಿ ಇಳಿದು 15,965 ರಲ್ಲಿತ್ತು.

ಇದಕ್ಕೆ ಮೂಲ ಕಾರಣ ರೂಪಾಯಿ ಮೌಲ್ಯದಲ್ಲಾದ ಕುಸಿತ. ರೂಪಾಯಿ ಬೆಲೆಯು ಡಾಲರ್ ವಿರುದ್ಧ ಗುರುವಾರದಂದು ದಾಖಲೆಯ ಕುಸಿತ ಪ್ರದರ್ಶಿಸಿ ಶುಕ್ರವಾರ ರೂ55.54ಕ್ಕೆ ಚೇತರಿಸಿಕೊಂಡಿತು. ಇದರ ಪ್ರಭಾವದಿಂದ ವಾತಾವರಣವು ಇಳಿಕೆಯ ಹಾದಿಗೆ ತಿರುಗಿದ್ದರೂ ಗುರುವಾರದಂದು ಪ್ರಕಟವಾದ `ಜಿಡಿಪಿ~ ಬೆಳವಣಿಗೆಯ ಕುಸಿತದ ಅಂಶವು ಸಂಪೂರ್ಣವಾದ ನಿಶ್ಚೇಷ್ಠತೆಯನ್ನು ನಿರ್ಮಿಸಿತು.

ಮೂಲಾಧಾರಿತ ಪೇಟೆಯ ಚುಕ್ತಾಚಕ್ರವಾದ್ದರಿಂದ ಈ ಅಂಶವು ಇಳಿಕೆಗೆ ಪೂರಕವಾಗಿತ್ತು. ಕಳೆದ ಒಂದು ತಿಂಗಳಲ್ಲಿ ಸಂವೇದಿ ಸೂಚ್ಯಂಕ 1353 ಅಂಶಗಳಷ್ಟು ಹಾನಿ ಕಂಡಿದ್ದರೆ. ಒಂದು ವರ್ಷದಲ್ಲಿ 2643 ಅಂಶಗಳಷ್ಟು ಕುಸಿತ ಕಂಡಿದೆ. ಈ ಸಂದರ್ಭದಲ್ಲಿ ಶುಕ್ರವಾರ ದೆಹಲಿಯ ಉಚ್ಚನ್ಯಾಯಾಲಯವು ಇಂದ್ರಪ್ರಸ್ತ ಗ್ಯಾಸ್ ಕಂಪೆನಿ ಪರವಾಗಿ ತೀರ್ಪು ನೀಡಿ ಪೆಟ್ರೋಲಿಯಂ ಅಂಡ್ ನ್ಯಾಚುರಲ್ ಗ್ಯಾಸ್ ರೆಗ್ಯುಲೇಟರಿ ಬೋರ್ಡ್ ಬೆಲೆಗಳನ್ನು ನಿರ್ಧರಿಸುವ ಅಧಿಕಾರವಿಲ್ಲವೆಂದ ಕಾರಣ ಷೇರಿನ ಬೆಲೆಯು ರೂ200ರ ಹಂತದಿಂದ ರೂ270ರ ವರೆಗೂ ಜಿಗಿತ ಕಂಡಿತು.
 
ರೂ249ರ ಸಮೀಪ ಅಂತ್ಯ ಕಂಡಿತು. ಈ ಅಂಶದಿಂದ ಪ್ರೇರಿತವಾಗಿ ಗುಜರಾತ್ ಗ್ಯಾಸ್ ಸುಮಾರು 15% ರಷ್ಟು, ಗುಜರಾತ್ ಸ್ಟೇಟ್ ಪೆಟ್ರೋನೆಟ್ ಶೇ 11ಕ್ಕೂ ಹೆಚ್ಚಿನ ಏರಿಕೆ ಪಡೆದವು. ಈ ಮೂಲಕ ಈ ವಲಯವು ನಿಸ್ಸಾರವಾದ ಪೇಟೆಯಲ್ಲಿ ಮಿಂಚಿದ ತಾರೆಗಳಾದವು.

ವಾರದಲ್ಲಿ ಒಟ್ಟಾರೆ 252 ಅಂಶಗಷ್ಟು ಹಾನಿಕಂಡ ಸೂಚ್ಯಂಕ ತನ್ನೊಂದಿಗೆ ಮಧ್ಯಮ ಶ್ರೇಣಿ ಸೂಚ್ಯಂಕವನ್ನು 78 ಅಂಶಗಳಷ್ಟು ಹಾಗೂ ಕೆಳಮಧ್ಯಮ ಶ್ರೇಣಿ ಸೂಚ್ಯಂಕ 123 ಅಂಶಗಳಷ್ಟು ಹಾನಿ ಕಾಣುವಂತೆ ಮಾಡಿತು. ವಿದೇಶಿ ವಿತ್ತೀಯ ಸಂಸ್ಥೆಗಳು ರೂ 697 ಕೋಟಿ ಮೌಲ್ಯದ ಹಾಗೂ ಸ್ವದೇಶಿ ವಿತ್ತೀಯ ಸಂಸ್ಥೆಗಳು ರೂ275 ಕೋಟಿ ಮೌಲ್ಯದ ಷೇರನ್ನು ಮಾರಾಟ ಮಾಡಿದವು. ಷೇರು ಪೇಟೆ ಬಂಡವಾಳ  ಮೌಲ್ಯವು ಹಿಂದಿನ ವಾರದ ರೂ58.01 ಲಕ್ಷ ಕೋಟಿಯಿಂದ ರೂ57.26 ಲಕ್ಷ ಕೋಟಿಗೆ ಇಳಿದಿದೆ.

ಲಾಭಾಂಶ ವಿಚಾರ
ಎಐಎ ಇಂಜಿನಿಯರಿಂಗ್ ಶೇ 150 (ಮು. ಬೆ. ರೂ2), ಅಚ್ಚಾನ್ ಆಫ್ ಷೇರ್ ಶೇ 180 (ಮು. ಬೆ. ರೂ2), ಆಲ್ ಕಾರ್ಗೊ ಲಾಜಿಸ್ಟಿಕ್ ಶೇ 25 (ಮು. ಬೆ. ರೂ2) ಏಶಿಯನ್ ಹೋಟೆಲ್ಸ್ (ನಾರ್ತ್) ಶೇ 15, ಅಪೊಲೋ ಹಾಸ್ಪಿಟಲ್ಸ್ ಶೇ 80 (ಮು. ಬೆ.ರೂ2), ಎಪಿಎಂ ಇಂಡಸ್ಟ್ರೀಸ್ ಶೇ 30 (ಮು. ಬೆ. ರೂ2), ಅಲ್ಬರ್ಟ್ ಡೇವಿಡ್ ಶೇ 45, ಅರವಿಂದೋ ಫಾರ್ಮ ಶೇ 100 (ಮು. ಬೆ. ರೂ 1), ಏಜಿಸ್ ಲಾಜಿಸ್ಟಿಕ್ಸ್ ಶೇ 20, ಅಮೃತಾಂಜನ್ ಶೇ 100, ಅನಂತರಾಜ್ ಇಂಡಸ್ಟ್ರೀಸ್ ಶೇ 20 (ಮು. ಬೆ. ರೂ2), ಅನೂಫಾರ್ಮಾ ಶೇ 110 (ಮು. ಬೆ. ರೂ 5), ಆಂಜನೇಯ ಲೈಫ್ ಕೇರ್ ಶೇ 20, ಬಾಲಕೃಷ್ಣ ಇಂಡಸ್ಟ್ರೀಸ್ ಶೇ 75 (ಮು. ಬೆ. ರೂ 2), ಬನಾರಸ್ ಬೀಡ್ಸ್ ಶೇ 15, ಬಿ.ಇ.ಎಂ.ಎಲ್. ಶೇ 50, ಬ್ರಿಟನಿಯಾ ಇಂಡಸ್ಟ್ರೀಸ್ ಶೇ 425 (ಮು. ಬೆ. ರೂ2), ಬಿ.ಇ.ಎಂ.ಎಲ್. ಶೇ 50, ಬ್ಲಿಸ್ ಜಿ.ವಿ.ಎಸ್. ಫಾರ್ಮ ಶೇ 40 (ಮು. ಬೆ. ರೂ1), ಬ್ಯಾಲಕೂ ಫ್ರಾಡಕ್ಟ್ಸ್ ಶೇ 125 (ಮು. ಬೆ. ರೂ2), ಬಜಾಜ್ ಎಲೆಕ್ಟ್ರಿಕಲ್ ಶೇ 140 (ಮು. ಬೆ. ರೂ2), ಬಾಂಬೆ ಡೈಯಿಂಗ್ ಶೇ 50, ಬಿ.ಜಿ.ಆರ್. ಎನರ್ಜಿ ಶೇ 70, ಅಮರ್ ರಾಜ್ ಬ್ಯಾಟರೀಸ್ ಶೇ 18.97 (ಮು. ಬೆ. ರೂ2), ಕ್ಯಾಪ್ರಿಹ್ಯಾನ್ಸ್ ಶೇ 15, ಕಂಪ್ಯೂಕಾಂ ಸಾಪ್ಟ್‌ವೇರ್ ಶೇ 15 (ಮು. ಬೆ. ರೂ 2), ಚೆಟ್ಟಿನಾಡ್ ಸೀಮೆಂಟ್ ಚೇವಿಯಟ್ ಶೇ 135, ಡಿ.ಸಿ.ಎಂ ಶೇ 25, ಡಿಪಿಎಲ್ ಲಿ. ಶೇ 25, ಡೆಲ್ಟಾನ್ ಕೇವಲ್ ಶೇ 15, ಎಕ್ಸೆಲ್ ಕ್ರಾಪ್ ಶೇ 40 (ಮು. ಬೆ ರೂ5), ಎಲೆಕ್ಟ್ರೊಸ್ಟೀಲ್ ಕ್ಯಾಸ್ಟಿಂಗ್ಸ್ ಶೇ 50 (ಮು. ಬೆ.ರೂ 1), ಇಂಜಿನಿಯರ್ಸ್ ಇಂಡಿಯಾ ಶೇ 80 (ಮು. ಬೆ. ರೂ 5), ಇಐಎಚ್ ಶೇ 55 (ಮು. ಬೆ.ರೂ2), ಇಐಎಚ್ ಅಸೋಸಿಯೇಟೆಡ್ ಶೇ 30, ಎಸ್.ಡಿ. ಅಲ್ಯುಮಿನಿಯಂ ಶೇ 20, ಎಜುಕಾಂಪ್ ಸೊಲೂಷನ್ಸ್ ಶೇ 15 (ಮು. ಬೆ.ರೂ 2), ಪ್ಯೂಚರ್ ಕ್ಯಾಪಿಟಲ್ ಹೋಲ್ಡಿಂಗ್ಸ್ ಶೇ 15, ಫಸ್ಟ್ ಲೀಸಿಂಗ್ ಶೇ 15, ಗಾಯತ್ರಿ ಪ್ರಾಜೆಕ್ಟ್ಸ್ ಶೇ 30, ಜಿಪಿಟಿ ಇನ್‌ಫ್ರಾ ಪ್ರಾಜೆಕ್ಟ್ ಶೇ 15, ಗಾಡ್‌ಫ್ರೆ ಫಿಲಿಪ್ಸ್ ಶೇ 400, ಜಿ.ಎನ್.ಎಫ್.ಸಿ. ಶೇ 35, ಜಿ.ಎಸ್.ಎಫ್.ಸಿ. ಶೇ 75, ಗ್ಲೋಸ್ಟರ್ ಜೂಟ್ ಶೇ 200, ಗ್ರೀನ್ ಪ್ಲೈ ಇಂಡಸ್ಟ್ರೀಸ್ ಶೇ 40 (ಮು. ಬೆ. ರೂ 5), ಗಲ್ಫ್ ಆಯಿಲ್ ಶೇ 110 (ಮು. ಬೆ. ರೂ2), ಗ್ರೀನ್ ಪ್ಲೈ ಇಂಡಸ್ಟ್ರೀಸ್ ಶೇ 40 (ಮು. ಬೆ. ರೂ5), ಗೇಲ್ ಶೇ 57, ಎಚ್‌ಪಿಸಿಎಲ್ ಶೇ 85, ಹೆರಿಟೇಜ ಫುಡ್ ಶೇ 20, ಹ್ಯಾವೆಲ್ಸ್ ಇಂಡಿಯಾ ಶೇ 130 (ಮು. ಬೆ.ರೂ5), ಹೈಟೆಕ್ ಗೇರ್ಸ್‌ ಶೇ 25, ಹರಿತಾ ಸೀಟಿಂಗ್ ಶೇ 35, ಇಂಡಿಯನ್ ಆಯಿಲ್ ಶೇ 50, ಇಂಡೊಕೊ ರೆಮೆಡಿಸ್ ಶೇ 55 (ಮು. ಬೆ. ರೂ 2), ಇಪಾಕ್ ಲ್ಯಾಬ್ ಶೇ 60 (ಮು. ಬೆ. ರೂ2), ಇಂಪಾಲ್ ಶೇ 190, ಇನ್ನೊವೆಂಟಿವ್ ಇಂಡಸ್ಟ್ರೀಸ್ ಶೇ 30, ಇಂಡಿಯನ್ ಹ್ಯೂಂ ಪೈಪ್ ಶೇ 100 (ಮು. ಬೆ. ರೂ2), ಜೆ. ಪಿ. ಇಂಡಸ್ಟ್ರೀಸ್ ಶೇ 25 (ಮು. ಬೆ. ರೂ2), ಜಯಶ್ರೀ ಟೀ ಶೇ 60 (ಮು. ಬೆ. ರೂ5), ಜಿಂದಾಲ್ ಸಾ ಶೇ 50 (ಮು. ಬೆ. ರೂ2), ಹಾವೇರಿ ಟೆಲಿಕಾಂ ಶೇ 40, ಕೃತಿ ಇಂಡಸ್ಟ್ರೀಸ್ ಶೇ 15 (ಮು. ಬೆ . ರೂ. 1), ಖೈತಾನ್ ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ ಶೇ 24 (ಮು. ಬೆ. ರೂ1), ಲ್ಯೂಮ್ಯಾಕ್ಸ್ ಶೇ 60, ಲುಮ್ಯಾಕ್ಸ್ ಆಟೊ ಟೆಕ್ನಾಲಜಿ ಶೇ 60, ಮೆನನ್ ಬೇರಿಂಗ್ಸ್ ಶೇ 55 (ಮು. ಬೆ. ರೂ5), ಮ್ಯಾನ್ ಇನ್‌ಫ್ರಾ ಶೇ 45, ಮೆನನನ್ ಪಿಸ್ಟನ್ ಶೇ 35, ಮುಂಜಾಲ್ ಆಟೊ ಶೇ 100 (ಮು. ಬೆ.ರೂ 2) ಮದರ್‌ಸನ್ ಸುಮಿ ಶೇ 225 (ಮು. ಬೆ. ರೂ1), ಮೊದಿಸನ್ ಮೆಟಲ್ಸ್ ಶೇ 100 (ಮು. ಬೆ. ರೂ1), ಮರಾತನ್ ನೆಕ್ಸ್ಟ್ ಜನ್ ರಿಯಲ್ಟಿ ಶೇ 60, ನೈವೇಲಿ ಲಿಗ್ನೈಟ್ ಶೇ 28, ಎನ್‌ಆರ್‌ಬಿ ಬೇರಿಂಗ್ಸ್ ಶೇ 100 (ಮು. ಬೆ. ರೂ2), ನೆಸ್ಕೊ ಶೇ 30, ನ್ಯೂಕ್ಲಿಯರ್ ಪವರ್ ಸಿಸ್ಟಂ ಶೇ 30, ಓರಿಯಂಟ್ ಅಬ್ರೆಸಿವ್ಸ್ ಶೇ 20 (ಮು. ಬೆ. ರೂ2), ಓರಿಯಂಟ್ ಕಾರ್ಬನ್ ಶೇ 30, ಪೊಲಿ ಮೆಡಿಕ್ಯೂರ್ ಶೇ 30, ಪಿ.ಎಸ್.ಎಲ್. ಶೇ 20, ಪ್ರಾಜ್ ಇಂಡಸ್ಟ್ರೀಸ್ ಶೇ 81 (ಮು. ಬೆ. ರೂ 2), ಪಿಲಾನಿ ಇನ್ವೆಸ್ಟ್‌ಮೆಂಟ್ಸ್ ಶೇ 250, ರೂಪ ಅಂಡ್ ಕೊ ಶೇ 25, ರತ್ನಮಣಿ ಮೆಟಲ್ಸ್ ಶೇ 150 (ಮು. ಬೆ. ರೂ2), ರೆಪ್ರೊ ಇಂಡಿಯಾ ಶೇ 100, ರಾಜೇಶ್ ಎಕ್ಸ್‌ಪೋರ್ಟ್ಸ್ ಶೇ 60 (ಮು. ಬೆ. ರೂ 2), ಆರ್‌ಇಐ ಆಗ್ರೊ ಶೇ 50 (ಮು. ಬೆ. ರೂ1), ರ‌್ಯಾಡಿಕೊ ಖೈತಾನ್ ಶೇ 20 (ಮು. ಬೆ. ರೂ2), ರಾಣೆ ಹೋಲ್ಡಿಂಗ್ಸ್ ಶೇ 40, ಶ್ರೀ ಶಕ್ತಿ ಪೇಪರ್ ಮಿಲ್ಸ್ ಶೇ 21, ಸುಂದರಂ ಫೈನಾನ್ಸ್ ಶೇ 75, ಸುಪ್ರಜತ್ ಇಂಜಿನಿಯರಿಂಗ್ ಶೇ 35, ಸುಖಜಿತ್ ಸ್ಟಾರ್ಚ್ ಶೇ 45, ಸನ್‌ಫಾರ್ಮ ಶೇ 425 (ಮು. ಬೆ. ರೂ1) ಸ್ಟೀಲ್ ಸ್ಟ್ರಿಪ್ಸ್ ಅಂಡ್ ವೀಲ್ಸ್ ಶೇ 15, ಸದರ್ನ್ ಗ್ಯಾಸ್ ಶೇ 30, ಸರೂಪ್ ಟ್ಯಾನರೀಸ್ ಶೇ 15, ಶೇಷಸಾಯಿ ಪೇಪರ್ಸ್ ಶೇ 50, ಸಾಂಘವಿ ಮೂವರ್ಸ್ ಶೇ 30, ಸವಿತಾ ಆಯಿಲ್ ಟೆಕ್ನಾಲಜಿ ಶೇ 150, ಶ್ರೀ ನೂಜ್ ಶೇ 32.5 (ಮು. ಬೆ. ರೂ 2), ಸುಬ್ರೊಸ್ ಶೇ 55 (ಮು. ಬೆ. ರೂ2), ಸಾಂಕೊಟ್ರಾನ್ಸ್ ಶೇ 27, ಟಾಟಾ ಕೆಮಿಕಲ್ಸ್ ಶೇ 100, ಟೆಕ್ನೊಫ್ಯಾಬ್ ಇಂಜಿನಿಯರಿಂಗ್ ಶೇ 20, ಯುನೈಟೆಡ್ ಸ್ಪಿರಿಟ್ ಶೇ 25, ಯುಪಿ ಹೋಟೆಲ್ಸ್ ಶೇ 50, ಅಲ್ಟ್ರಾಪುರೈನ್ ಪಿಗ್‌ಮೆಂಟ್ಸ್ ಶೇ 150 (ಮು. ಬೆ. ರೂ 2), ವಾಡಿಲಾಲ್ ಇಂಡಸ್ಟ್ರೀಸ್ ಶೇ 15, ವಿವಿಮೆಡ್ ಲ್ಯಾಬ್ ಶೇ 30, ವಿಎಸ್‌ಟಿ ಟಿಲ್ಲರ್ಸ್ ಶೇ 90, ವೀಲ್ಸ್ ಇಂಡಿಯಾ ಶೇ 60.

ಬೋನಸ್ ಷೇರಿನ ವಿಚಾರ
*ಏಶಿಯನ್ ಸ್ಟಾರ್ ಕಂಪೆನಿಯು 1:2ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ. ಅಡಿ ಫೈನ್ಸ್ ಕೆಂ ಲಿ. 1:5ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ. ಆರ್ಬಿಟ್ ಎಕ್ಸ್‌ಪೋರ್ಟ್ಸ್ ಕಂಪೆನಿಯು 1:2ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ. ಲೈಫ್‌ಲೈನ್ ಡ್ರಗ್ಸ್ ಕಂಪೆನಿಯು 4:1ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.
ಅಮರರಾಜ ಬ್ಯಾಟರೀಸ್ ಷೇರಿನ ಮುಖ ಬೆಲೆ ರೂ2 ರಿಂದ ರೂ 1ಕ್ಕೆ ಸೀಳಲಿದೆ.

ಚಟುವಟಿಕೆ ಬೇರ್ಪಡಿಸುವಿಕೆ
ಹರಿಯಾ ಎಕ್ಸ್‌ಪೋರ್ಟ್ಸ್ ಲಿ. ಕಂಪೆನಿಯ ಸಿದ್ಧ ಉಡಪು ವಿಭಾಗವನ್ನು ಬೇರ್ಪಡಿಸಿ ಹರಿಯಾ ಅಪರಲ್ಸ್ ಲಿ. ನಲ್ಲಿ ವಿಲೀನಗೊಳಿಸಲು ತೀರ್ಮಾನಿಸಿ ಜೂನ್ 7ನ್ನು ನಿಗದಿತ ದಿನಾಂಕವಾಗಿಸಿದೆ. ಪ್ರತಿ ನೂರು ಹರಿಯಾ ಎಕ್ಸ್‌ಪೋರ್ಟ್ಸ್ ಷೇರಿಗೆ 127 ಹರಿಯಾ ಅಪರಲ್ಸ್ ಷೇರನ್ನು ನೀಡಲಾಗುವುದು.

ಬಂಡವಾಳ ಕಡಿತ
*ಜವೇರಿ ವೆಲ್ಡ್‌ಫ್ಲಕ್ಸ್ ಲಿ. ಕಂಪೆನಿಯ ಷೇರಿನ ಬಂಡವಾಳವನ್ನು ಶೇ 90 ರಷ್ಟನ್ನು ಕಡಿತಗೊಳಿಸಲು ನಿರ್ಧರಿಸಿದ್ದು ರೂ. 10ರ ಮುಖ ಬೆಲೆಯನ್ನು ರೂ1ಕ್ಕೆ ಇಳಿಸಿ ನಂತರ ಎರಡು ಷೇರನ್ನು ಕ್ರೋಢೀಕರಿಸಿ ರೂ2ರ ಮುಖ ಬೆಲೆಯ ಷೇರನ್ನಾಗಿ ಪರಿವರ್ತಿಸಲು ಜೂನ್ 7 ನಿಗದಿತ ದಿನವಾಗಿದೆ.

*ಗುಜರಾತ್ ಥೆಮಿಸ್ ಬಯೋಸಿನ್ ಕಂಪೆನಿಯ ಷೇರಿನ ಮುಖ ಬೆಲೆಯನ್ನು ರೂ10 ರಿಂದ ರೂ5ಕ್ಕೆ ಕಡಿತಗೊಳಿಸುವ ಮೂಲಕ ಬಂಡವಾಳ ಕಡಿತಗೊಳಿಸಲಾಗುವುದು. ಈ ಕ್ರಮಕ್ಕೆ ಜೂನ್ 7 ನಿಗದಿತ ದಿನವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.