ಬೆಂಗಳೂರು:ಷೇರುಪೇಟೆಯಲ್ಲಿ ಮಾರಾಟ ಒತ್ತಡ ಮುಂದುವರಿದಿದ್ದು, ಹೂಡಿಕೆದಾರರ ಸಂಪತ್ತು ಕರಗುತ್ತಿದೆ.
ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ, ಮಂಗಳವಾರ ಹೂಡಿಕೆದಾರರ ಸಂಪತ್ತು ₹1.72 ಲಕ್ಷ ಕೋಟಿಗಳಷ್ಟು ಕರಗಿದೆ. ಷೇರುಪೇಟೆಯ ಬಂಡವಾಳ ಮೌಲ್ಯ ₹ 140.73 ಲಕ್ಷ ಕೋಟಿಗೆ ಇಳಿಕೆಯಾಗಿದೆ.
ಬಜೆಟ್ ನಂತರ ಜುಲೈ 30ರವರೆಗೆ ಹೂಡಿಕೆದಾರರ ಸಂಪತ್ತಿನಲ್ಲಿ ₹ 10.62 ಲಕ್ಷ ಕೋಟಿಗಳಷ್ಟು ಕರಗಿದೆ. ಜುಲೈ 5 ರಂದು ಪೇಟೆಯ ಬಂಡವಾಳ ಮೌಲ್ಯ ₹ 151.35 ಲಕ್ಷ ಕೋಟಿ ಇತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.