ADVERTISEMENT

ಬಿಎಸ್‌ಇ ಸೆನ್ಸೆಕ್ಸ್ 540 ಅಂಶ ಕುಸಿತ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2020, 18:53 IST
Last Updated 26 ಅಕ್ಟೋಬರ್ 2020, 18:53 IST

ಮುಂಬೈ: ಫ್ಯೂಚರ್‌ ಗ್ರೂಪ್‌ನ ರಿಟೇಲ್‌ ವಹಿವಾಟು ಖರೀದಿಸಲು ರಿಲಯನ್ಸ್ ಇಂಡಸ್ಟ್ರೀಸ್‌ ನಡೆಸಿದ ಪ್ರಯತ್ನಕ್ಕೆ ಮಧ್ಯಸ್ಥಿಕೆ ಕೇಂದ್ರವೊಂದು ತಡೆಯಾಜ್ಞೆ ನೀಡಿದ ಬೆನ್ನಲ್ಲೇ, ರಿಲಯನ್ಸ್ ಷೇರುಗಳ ಮೌಲ್ಯ ಶೇಕಡ 3.97ರಷ್ಟು ಕುಸಿಯಿತು. ಇದರ ಜೊತೆಯಲ್ಲೇ, ರೂಪಾಯಿ ಮೌಲ್ಯದಲ್ಲಿ ಆದ ತೀವ್ರ ಕುಸಿತ ಹಾಗೂ ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ನಕಾರಾತ್ಮಕ ವಹಿವಾಟು ಹೂಡಿಕೆದಾರರ ವಿಶ್ವಾಸ ಉಡುಗಿಸಿದವು.

ಇದರಿಂದಾಗಿ ಬಿಎಸ್‌ಇ ಸೆನ್ಸೆಕ್ಸ್ ಸೋಮವಾರದ ವಹಿವಾಟಿನಲ್ಲಿ ಒಟ್ಟು 540 ಅಂಶ ಕುಸಿಯುವಂತೆ ಆಯಿತು. ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ ಗರಿಷ್ಠ 737 ಅಂಶಗಳವರೆಗೆ ಕುಸಿದಿತ್ತು. ದಿನದ ಅಂತ್ಯಕ್ಕೆ ಸೂಚ್ಯಂಕವು 40,145 ಅಂಶಗಳಲ್ಲಿ ಕೊನೆಗೊಂಡಿತು.

ಬಜಾಜ್ ಆಟೊ ಷೇರುಗಳು ಶೇಕಡ 6.10ರಷ್ಟು ಕುಸಿದವು. ಮಹೀಂದ್ರ ಆ್ಯಂಡ್ ಮಹೀಂದ್ರ, ರಿಲಯನ್ಸ್, ಟಾಟಾ ಸ್ಟೀಲ್, ಟೆಕ್ ಮಹೀಂದ್ರ, ಎಸ್‌ಬಿಐ, ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಷೇರುಗಳು ಕೂಡ ಕುಸಿತ ದಾಖಲಿಸಿದವು. ನೆಸ್ಲೆ ಇಂಡಿಯಾ, ಕೋಟಕ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಪವರ್ ಗ್ರಿಡ್ ಮತ್ತು ಎಚ್‌ಯುಎಲ್‌ ಷೇರುಗಳು ಏರಿಕೆ ಕಂಡವು.

ADVERTISEMENT

‘ಎರಡನೆಯ ತ್ರೈಮಾಸಿಕದಲ್ಲಿ ಕಂಪನಿಗಳು ಘೋಷಿಸುವ ಫಲಿತಾಂಶವು ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ’ ಎಂದು ವಿಶ್ಲೇಷಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.