ADVERTISEMENT

ಎಲ್‌ಐಸಿ ಷೇರು: ನೀಡಿಕೆ ಬೆಲೆಗಿಂತ ಶೇ 29ರಷ್ಟು ಕುಸಿತ

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 20:30 IST
Last Updated 13 ಜೂನ್ 2022, 20:30 IST
   

ಮುಂಬೈ: ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಷೇರುಮೌಲ್ಯವು ಸೋಮವಾರ ಶೇಕಡ 6ರವರೆಗೂ ಇಳಿಕೆ ಆಗಿದೆ. ಒಟ್ಟಾರೆ 10 ದಿನಗಳಲ್ಲಿ ಕಂಪನಿಯ ಷೇರಿನ ಮೌಲ್ಯವು ಶೇ 20.17ರಷ್ಟು ಇಳಿಕೆ ಕಂಡಿದೆ.

ನೀಡಿಕೆ ಬೆಲೆ ₹ 949ಕ್ಕೆ ಹೋಲಿಸಿದರೆ ಷೇರಿನ ಮೌಲ್ಯವು ಶೇ 29.58ರಷ್ಟು ಕುಸಿತ ಕಂಡಿದೆ.

ಮುಂಬೈ ಷೇರುಪೇಟೆಯಲ್ಲಿ ಕಂಪನಿಯ ಷೇರಿನ ಬೆಲೆಯು ಶೇ 5.85ರಷ್ಟು ಇಳಿಕೆ ಆಗಿ ಪ್ರತಿ ಷೇರಿನ ಬೆಲೆ ₹ 668.20ಕ್ಕೆ ತಲುಪಿತು. ರಾಷ್ಟ್ರೀಯ ಷೇರುಪೇಟೆಯಲ್ಲಿ ಶೇ 6ರಷ್ಟು ಕಡಿಮೆ ಆಗಿ ಪ್ರತಿ ಷೇರಿನ ಬೆಲೆ
₹ 666.90ಕ್ಕೆ ತಲುಪಿತು.

ADVERTISEMENT

ಷೇರುಪೇಟೆಯ ಪ್ರಮುಖ 10 ಮೌಲ್ಯಯುತ ಕಂಪನಿಗಳ ಸಾಲಿನಲ್ಲಿ ಎಲ್‌ಐಸಿ ಏಳನೇ ಸ್ಥಾನದಲ್ಲಿದೆ. ಇದರ ಮಾರುಕಟ್ಟೆ ಬಂಡವಾಳ ಮೌಲ್ಯವು ₹ 4.22 ಲಕ್ಷ ಕೋಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.