ಷೇರುಪೇಟೆ
ನವದೆಹಲಿ: ಕಳೆದ ವಾರ ನಡೆದ ಷೇರುಪೇಟೆ ವಹಿವಾಟಿನಲ್ಲಿ ಷೇರು ಸೂಚ್ಯಂಕಗಳ ಇಳಿಕೆಯಿಂದ ಪ್ರಮುಖ 10 ಕಂಪನಿಗಳ ಪೈಕಿ 5 ಕಂಪನಿಗಳ ಮಾರುಕಟ್ಟೆ ಮೌಲ್ಯ (ಎಂ–ಕ್ಯಾಪ್) ₹1.85 ಲಕ್ಷ ಕೋಟಿ ಕರಗಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಮಾರುಕಟ್ಟೆ ಮೌಲ್ಯ ₹70,479 ಕೋಟಿ ಕರಗಿದೆ. ಒಟ್ಟು ಎಂ–ಕ್ಯಾಪ್ ₹12.67 ಲಕ್ಷ ಕೋಟಿಗೆ ಇಳಿದಿದೆ. ಐಟಿಸಿ ₹46,481 ಕೋಟಿ, ಎಸ್‌ಬಿಐ ₹44,935 ಕೋಟಿ, ರಿಲಯನ್ಸ್ ಇಂಡಸ್ಟ್ರೀಸ್ ₹12,179 ಕೋಟಿ ಮತ್ತು ಐಸಿಐಸಿಐ ಬ್ಯಾಂಕ್ ಮಾರುಕಟ್ಟೆ ಮೌಲ್ಯ ₹11,877 ಕೋಟಿ ಕರಗಿದೆ.
ಟಿಸಿಎಸ್ ಮಾರುಕಟ್ಟೆ ಮೌಲ್ಯಕ್ಕೆ ₹60,168 ಕೋಟಿ ಸೇರ್ಪಡೆಯಾಗಿದೆ. ಕಂಪನಿಯ ಒಟ್ಟು ಎಂ–ಕ್ಯಾಪ್ ₹15.43 ಲಕ್ಷ ಕೋಟಿಯಾಗಿದೆ. ಎಚ್‌ಸಿಎಲ್ ₹13,120 ಕೋಟಿ, ಇನ್ಫೊಸಿಸ್ ₹11,792 ಕೋಟಿ, ಭಾರ್ತಿ ಏರ್‌ಟೆಲ್ ₹8,999 ಕೋಟಿ, ಹಿಂದುಸ್ತಾನ್ ಯುನಿಲಿವರ್ ಮಾರುಕಟ್ಟೆ ಮೌಲ್ಯಕ್ಕೆ ₹8,564 ಕೋಟಿ ಸೇರ್ಪಡೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.