ADVERTISEMENT

ಸೆನ್ಸೆಕ್ಸ್‌ 503 ಅಂಶ ಚೇತರಿಕೆ

ಪಿಟಿಐ
Published 26 ಮೇ 2022, 15:49 IST
Last Updated 26 ಮೇ 2022, 15:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಷೇರುಪೇಟೆಗಳು ವಾರದ ವಹಿವಾಟಿನಲ್ಲಿ ಮೊದಲ ಬಾರಿಗೆ ಗಳಿಕೆ ಕಂಡುಕೊಂಡಿವೆ. ಲೋಹ, ಬ್ಯಾಂಕ್‌ ಮತ್ತು ಐ.ಟಿ. ವಲಯದ ಷೇರುಗಳ ಖರೀದಿಗೆ ಹೂಡಿಕೆದಾರರು ಮುಂದಾಗಿದ್ದರಿಂದ ಮೂರು ದಿನಗಳ ಕುಸಿತಕ್ಕೆ ತಡೆಬಿದ್ದಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 503 ಅಂಶ ಹೆಚ್ಚಾಗಿ 54,252 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 144 ಅಂಶ ಹೆಚ್ಚಾಗಿ 16,170 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು. ಸೆನ್ಸೆಕ್ಸ್‌ನಲ್ಲಿ ಟಾಟಾ ಸ್ಟೀಲ್‌ ಷೇರು ಮೌಲ್ಯ ಶೇ 5.27ರಷ್ಟು ಹೆಚ್ಚಾಯಿತು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡುವ ಪ್ರಮಾಣ ಕಡಿಮೆ ಆಗಿರುವುದೇ ಗುರುವಾರದ ವಹಿವಾಟಿನ ಚೇತರಿಕೆಗೆ ಕಾರಣ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ADVERTISEMENT

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ ಬ್ಯಾರಲ್‌ಗೆ ಶೇ 0.54ರಷ್ಟು ಹೆಚ್ಚಾಗಿ ಒಂದು ಬ್ಯಾರಲ್‌ಗೆ 114.7 ಡಾಲರ್‌ಗಳಿಗೆ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.