ADVERTISEMENT

ಸೆನ್ಸೆಕ್ಸ್‌ 760 ಅಂಶ ಜಿಗಿತ

ಐ.ಟಿ. ತೈಲ, ಅನಿಲ ಮತ್ತು ಬ್ಯಾಂಕಿಂಗ್‌ ಷೇರು ಮಾರಾಟ ಹೆಚ್ಚಳ

ಪಿಟಿಐ
Published 18 ಜುಲೈ 2022, 16:02 IST
Last Updated 18 ಜುಲೈ 2022, 16:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಮಾಹಿತಿ ತಂತ್ರಜ್ಞಾನ (ಐ.ಟಿ), ಬ್ಯಾಂಕಿಂಗ್‌ ಹಾಗೂತೈಲ ಮತ್ತು ಅನಿಲ ವಲಯದ ಷೇರುಗಳನ್ನು ಹೂಡಿಕೆದಾರರು ಹೆಚ್ಚು ಖರೀದಿ ಮಾಡಿದ ಪರಿಣಾಮವಾಗಿ ಸೆನ್ಸೆಕ್ಸ್‌ ಮತ್ತು ನಿಫ್ಟಿ ಶೇಕಡ 1ಕ್ಕೂ ಹೆಚ್ಚಿನ ಗಳಿಕೆ ಕಂಡುಕೊಂಡವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 761 ಅಂಶ ಹೆಚ್ಚಾಗಿ 54,521 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 229 ಅಂಶ ಏರಿಕೆ ಕಂಡು 16,278 ಅಂಶಗಳಿಗೆ ಏರಿಕೆ ಕಂಡಿತು.

‘ಇನ್ಫೊಸಿಸ್‌, ಟೆಕ್‌ ಮಹೀಂದ್ರದಂತಹ ದೊಡ್ಡ ಕಂಪನಿಗಳ ಗಳಿಕೆಯು ಷೇರುಪೇಟೆ ವಹಿವಾಟು ಏರಿಕೆಗೆ ಕಾರಣವಾದವು’ ಎಂದು ಆನಂದ ರಾಠಿ ಕಂಪನಿಯ ಈಕ್ವಿಟಿ ಸಂಶೋಧನೆಯ ಮುಖ್ಯಸ್ಥ ನರೇಂದ್ರ ಸೋಲಂಕಿ ತಿಳಿಸಿದ್ದಾರೆ.

ADVERTISEMENT

‘ಅಮೆರಿಕದ ರಿಟೇಲ್‌ ಮಾರಾಟವು ಹೆಚ್ಚಾಗಿರುವುದರಿಂದ ಅಲ್ಲಿನ ಕೇಂದ್ರೀಯ ಬ್ಯಾಂಕ್‌ ಹೆಚ್ಚಿನ ಪ್ರಮಾಣದಲ್ಲಿ ಬಡ್ಡಿ ದರ ಏರಿಕೆ ಮಾಡುವ ಆತಂಕ ಕಡಿಮೆ ಆಗಿದೆ. ಇದು ಸಕಾರಾತ್ಮಕ ವಹಿವಾಟಿಗೆ ಕಾರಣ ಆಯಿತು’ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ನಿಫ್ಟಿ ಐ.ಟಿ. ಸೂಚ್ಯಂಕ ಶೇ 3.17ರಷ್ಟು ಏರಿಕೆ ಕಂಡರೆ, ಲೋಹ ಸೂಚ್ಯಂಕ ಶೇ 2.49ರಷ್ಟು, ಬ್ಯಾಂಕಿಂಗ್ ಶೇ 1.95ರಷ್ಟು ಮತ್ತು ಗ್ರಾಹಕ ಬಳಕೆ ವಸ್ತುಗಳ ಸೂಚ್ಯಂಕ ಶೇ 1.45ರಷ್ಟು ಏರಿಕೆ ಕಂಡವು.

ಸಂಪತ್ತು ₹ 4.73 ಲಕ್ಷ ಕೋಟಿ ವೃದ್ಧಿ: ಎರಡು ದಿನಗಳ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯವು ₹ 4.73 ಲಕ್ಷ ಕೋಟಿಯಷ್ಟು ವೃದ್ಧಿಯಾಗಿದೆ. ಇದರಿಂದಾಗಿ ಷೇರುಪೇಟೆಯ ಒಟ್ಟಾರೆ ಬಂಡವಾಳ ಮೌಲ್ಯ ₹ 255.39 ಲಕ್ಷ ಕೋಟಿಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.