ADVERTISEMENT

ಷೇರುಪೇಟೆ: ವಾರದ ವಹಿವಾಟು ಇಳಿಮುಖ

ಪಿಟಿಐ
Published 23 ಮೇ 2020, 19:55 IST
Last Updated 23 ಮೇ 2020, 19:55 IST
ಮುಂಬೈ ಷೇರುಪೇಟೆ
ಮುಂಬೈ ಷೇರುಪೇಟೆ   

ಮುಂಬೈ: ದೇಶದ ಷೇರುಪೇಟೆಗಳ ವಾರದ ವಹಿವಾಟು ಇಳಿಮುಖವಾಗಿ ಮುಕ್ತಾಯವಾಗಿದೆ.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 425 ಅಂಶ ಇಳಿಕೆ ಕಂಡು 30,672 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 97 ಅಂಶ ಕಡಿಮೆಯಾಗಿ 9,039 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ADVERTISEMENT

ಆರ್‌ಬಿಐ ಬಡ್ಡಿದರದಲ್ಲಿ ಇಳಿಕೆ ಮಾಡಿದರೂ ಶುಕ್ರವಾರ ಷೇರುಪೇಟೆಗಳಲ್ಲಿ ಉತ್ಸಾಹ ಕಂಡುಬರಲಿಲ್ಲ.

ಕೋವಿಡ್‌–19 ಪ್ರಕರಣಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು,ಇದರ ಜತೆಗೆ ಆರ್ಥಿಕ ಉತ್ತೇಜನಕ್ಕೆ ಘೋಷಿಸಿರುವ ಕ್ರಮಗಳು ಪರಿಣಾಮಕಾರಿಯಾಗದೇ ಇರುವ ಸಾಧ್ಯತೆಯೂ ಹೂಡಿಕೆ ಚಟುವಟಿಕೆಯನ್ನು ಕುಗ್ಗುವಂತೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.