ADVERTISEMENT

ಮುಂದುವರಿದ ಸಕಾರಾತ್ಮಕ ವಹಿವಾಟು

ಪಿಟಿಐ
Published 19 ನವೆಂಬರ್ 2018, 18:36 IST
Last Updated 19 ನವೆಂಬರ್ 2018, 18:36 IST

ಮುಂಬೈ : ದೇಶದ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ಮುಂದುವರಿದಿದೆ. ವಿದೇಶಿ ಬಂಡವಾಳ ಒಳಹರಿವು ಮತ್ತು ರೂಪಾಯಿ ಮೌಲ್ಯವರ್ಧನೆಯು ಸೂಚ್ಯಂಕದ ಏರಿಕೆಗೆ ನೆರವಾಗಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಸೋಮವಾರ 317 ಅಂಶ ಜಿಗಿತ ಕಂಡು 35,774 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ಅಕ್ಟೋಬರ್‌ 3ರ ನಂತರ ದಿನದ ವಹಿವಾಟಿನ ಗರಿಷ್ಠ ಮಟ್ಟದ ಅಂತ್ಯ ಇದಾಗಿದೆ. ಹಿಂದಿನ ಎರಡು ವಹಿವಾಟು ಅವಧಿಗಳಲ್ಲಿ ಸೂಚ್ಯಂಕವು 315 ಅಂಶ ಏರಿಕೆ ಕಂಡಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 81 ಅಂಶ ಹೆಚ್ಚಾಗಿ 10,763 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ADVERTISEMENT

ಯೆಸ್‌ ಬ್ಯಾಂಕ್‌ ಶೇ 7.19ರಷ್ಟು ಗರಿಷ್ಠ ಗಳಿಕೆ ಕಂಡುಕೊಂಡಿತು. ಮೂರು ವಾರಗಳಲ್ಲಿಯೇ ಭಾರಿ ಗಳಿಕೆ ಇದಾಗಿದೆ. ಐಟಿಸಿ, ಟಾಟಾ ಮೋಟರ್ಸ್‌, ಇಂಡಸ್‌ಇಂಡ್‌ ಬ್ಯಾಂಕ್‌, ವೇದಾಂತ, ಸನ್‌ ಫಾರ್ಮಾ, ಮಹೀಂದ್ರಾ, ಮಾರುತಿ ಸುಜುಕಿ ಕಂಪನಿ ಷೇರುಗಳು ಶೇ 2.77ರವರೆಗೂ ಏರಿಕೆ ಕಂಡಿವೆ.

ಜಾಗತಿಕ ಮಟ್ಟದಲ್ಲಿ, ಏಷ್ಯಾದ ಶಾಂಘೈ ಕಾಂಪೊಸಿಟ್‌ ಸೂಚ್ಯಂಕ ಶೇ 0.91, ಜಪಾನ್‌ನ ನಿಕೇಯ್‌ ಶೇ 0.65, ಸಿಂಗಪುರ ಶೇ 0.95, ಹಾಂಕಾಂಗ್‌ನ ಹಾಂಗ್‌ಸೆಂಗ್‌ ಶೇ 0.45ರಷ್ಟು ಏರಿಕೆ ದಾಖಲಿಸಿವೆ. ಯುರೋಪಿನ ಷೇರುಪೇಟೆಗಳಲ್ಲಿಯೂ ಉತ್ತಮ ವಹಿವಾಟು ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.