ADVERTISEMENT

ಷೇರುಪೇಟೆಗೆ ವಿದೇಶಿ ಸಾಂಸ್ಥಿಕ ಹೂಡಿಕೆ ಬಲ

ಪಿಟಿಐ
Published 23 ಮಾರ್ಚ್ 2019, 17:27 IST
Last Updated 23 ಮಾರ್ಚ್ 2019, 17:27 IST
   

ಮುಂಬೈ: ವಿದೇಶಿ ಹೂಡಿಕೆದಾರರು ದೇಶದ ಷೇರುಪೇಟೆಗಳಲ್ಲಿ ನಿರಂತರವಾಗಿ ಬಂಡವಾಳ ತೊಡಗಿಸುತ್ತಿದ್ದಾರೆ. ಇದರಿಂದ ಸಕಾರಾತ್ಮಕ ಚಲನೆ ಮುಂದುವರಿದಿದೆ.

ಫೆಬ್ರುವರಿ ತಿಂಗಳಿನಿಂದಲೂ ವಿದೇಶಿ ಹೂಡಿಕೆಯಲ್ಲಿ ಏರಿಕೆಯಾಗುತ್ತಿದೆ.ಫೆಬ್ರುವರಿಯಲ್ಲಿ ಬಂಡವಾಳ ಮಾರುಕಟ್ಟೆಯ ಮೇಲೆ ₹ 11,182 ಕೋಟಿಹೂಡಿಕೆಮಾಡಿದ್ದರು.ಇದು 15 ತಿಂಗಳಿನಲ್ಲಿಯೇ ಗರಿಷ್ಠ ಹೂಡಿಕೆ
ಯಾಗಿದೆ.

ಈ ಹಿಂದೆ 2017ರ ನವೆಂಬರ್‌ನಲ್ಲಿ ₹ 19,728 ಕೋಟಿ ಹೂಡಿಕೆ ಮಾಡಿದ್ದರು.ಮಾರ್ಚ್‌ನಲ್ಲಿ ಇದುವರೆಗೆ ₹22,887 ಕೋಟಿಗೂ ಅಧಿಕ ಮೌಲ್ಯದ ಷೇರುಗಳನ್ನು ಖರೀದಿ ಮಾಡಿದ್ದಾರೆ.

ADVERTISEMENT

ಜಾಗತಿಕ ಮಟ್ಟದಲ್ಲಿ,ಅಮೆರಿಕ–ಚೀನಾ ವ್ಯಾಪಾರ ಒಪ್ಪಂದದಿಂದ ಸಕಾರಾತ್ಮಕ ಫಲಿತಾಂಶದ ನಿರೀಕ್ಷೆ ವ್ಯಕ್ತವಾಗಿದೆ. ಬಡ್ಡಿದರ ಏರಿಕೆಯಲ್ಲಿ ಆಕ್ರಮಣ ಮನೋಭಾವ ತಾಳದೇ ಇರಲು ಅಮೆರಿಕದ ಫೆಡರಲ್‌ ರಿಸರ್ವ್‌ ನಿರ್ಧರಿಸಿದೆ. ಈ ಬೆಳವಣಿಗೆಗೆಳು
ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳಿಗೆ ಲಾಭವಾಗಿ ಪರಿಣಮಿಸಿದೆ. ಇದರಿಂದಾಗಿ ವಿದೇಶಿ ಬಂಡವಾಳ ಹರಿದುಬರುತ್ತಿದೆ ಎನ್ನುವುದು ತಜ್ಞರ ವಿಶ್ಲೇಷಣೆ.

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಸರ್ಕಾರವೇ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎನ್ನುವುದು ಹೂಡಿಕೆದಾರರ ವಿಶ್ವಾಸವಾಗಿದೆ. ಇದರಿಂದಾಗಿಯೂ ಸಕಾರಾತ್ಮಕ ವಹಿವಾಟು ನಡೆಯುತ್ತಿದೆ.

ವಾರದ ವಹಿವಾಟು: ಮುಂಬೈ ಷೇರುಪೇಟೆ ಸೂಚ್ಯಂಕ ವಾರದ ವಹಿವಾಟಿನಲ್ಲಿ 140 ಅಂಶಗಳಷ್ಟು ಏರಿಕೆ ಕಂಡು 38,164 ಅಂಶಗಳಿಗೆ ತಲುಪಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 30 ಅಂಶ ಹೆಚ್ಚಾಗಿ 11,456 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯಗೊಂಡಿದೆ.

ಕರೆನ್ಸಿ ವಿನಿಮಯ ಮಾರುಕಟ್ಟೆಯ ವಾರದ ವಹಿವಾಟಿನಲ್ಲಿ, ಡಾಲರ್‌ ಎದುರು ರೂಪಾಯಿ ಮೌಲ್ಯ 15 ಪೈಸೆ ಹೆಚ್ಚಾಗಿ ಒಂದು ಡಾಲರ್‌ಗೆ ₹ 68.95ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.