ADVERTISEMENT

ಷೇರುಪೇಟೆಯಲ್ಲಿ ಕಳೆದಿದ್ದೆಲ್ಲ ಮರಳಿತು!

ಪಿಟಿಐ
Published 29 ಅಕ್ಟೋಬರ್ 2019, 19:12 IST
Last Updated 29 ಅಕ್ಟೋಬರ್ 2019, 19:12 IST
ಮುಂಬೈ ಷೇರು ಮಾರುಕಟ್ಟೆ
ಮುಂಬೈ ಷೇರು ಮಾರುಕಟ್ಟೆ   

ನವದೆಹಲಿ : ಕೇಂದ್ರ ಬಜೆಟ್‌ ಮಂಡನೆಯ ಬಳಿಕ ಮುಂಬೈ ಷೇರುಪೇಟೆಯಲ್ಲಿ ಹೂಡಿಕೆದಾರರು ಕಳೆದುಕೊಂಡಿದ್ದ ₹ 14 ಲಕ್ಷ ಕೋಟಿ ಸಂಪತ್ತು ಮರಳಿದೆ.

ಮಂಗಳವಾರ ನಡೆದ ಸಕಾರಾತ್ಮಕ ವಹಿವಾಟಿನಿಂದ ಹೂಡಿಕೆದಾರರ ಸಂಪತ್ತು ₹ 2.73 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದ್ದು, ಷೇರುಪೇಟೆಯಬಂಡವಾಳ ಮೌಲ್ಯ ₹ 152 ಲಕ್ಷ ಕೋಟಿಗೆ ತಲುಪಿದೆ.

ಜುಲೈ 5 ರಂದು ಕೇಂದ್ರ ಬಜೆಟ್‌ ಮಂಡನೆಗೂ ಮುನ್ನ ಬಂಡವಾಳ ಮೌಲ್ಯ ₹ 151.35 ಲಕ್ಷ ಕೋಟಿಗಳಷ್ಟಿತ್ತು.ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ಬಂಡವಾಳ ಮೌಲ್ಯವು ₹ 138 ಲಕ್ಷ ಕೋಟಿಗೂ ಇಳಿಕೆ ಕಂಡಿತ್ತು. ಇದರಿಂದ ಹೂಡಿಕೆದಾರರ ಸಂಪತ್ತು ₹ 13.35ಕೋಟಿಗೂ ಹೆಚ್ಚು ಕರಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.