ADVERTISEMENT

ಧಾರ್ಮಿಕತೆಯ ಜೊತೆಗೆ ಆಧ್ಯಾತ್ಮಿಕತೆಯೂ ಬೇಕು

ಶ್ರೀ ಶಂಕರಭಾರತೀ ಮಹಾಸ್ವಾಮಿಗಳು
Published 4 ಜುಲೈ 2020, 19:30 IST
Last Updated 4 ಜುಲೈ 2020, 19:30 IST
ಶ್ರೀ ಶಂಕರಭಾರತೀ ಮಹಾಸ್ವಾಮಿಗಳು
ಶ್ರೀ ಶಂಕರಭಾರತೀ ಮಹಾಸ್ವಾಮಿಗಳು   

ಚಾತುರ್ಮಾಸ್ಯ ಎನ್ನುವುದು ಅತ್ಯಂತ ಶ್ರೇಷ್ಠವಾದದ್ದು, ಇದರಲ್ಲಿ ಸಂದೇಹವಿಲ್ಲ. ಆದರೆ ಈ ಚಾತುರ್ಮಾಸ್ಯದಲ್ಲಿ ನಾವು ಹೇಗೆ ಭಾಗವಹಿಸಬೇಕು, ಉಪಯೋಗ ಮಾಡಿಕೊಳ್ಳಬೇಕೆನ್ನುವುದು ಬಹಳ ಮುಖ್ಯ. ಇದೊಂದು ಕೇವಲ ಧಾರ್ಮಿಕ ಕಾರ್ಯಕ್ರಮ ಎಂದು ಭಾವಿಸಬಾರದು. ತೀರ್ಥ ತೆಗೆದುಕೊಳ್ಳುವುದು, ಹೋಮಗಳಲ್ಲಿ ಭಾಗವಹಿಸುವುದು, ಇತ್ಯಾದಿಗಳಿಂದ ಚಾತುರ್ಮಾಸ್ಯದ ಫಲ ಸಿಕ್ಕಿತೆಂದು ಭಾವಿಸಿದರೆ ತಪ್ಪು. ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಧಾರ್ಮಿಕದ ಒಟ್ಟಿಗೆ ಆಧ್ಯಾತ್ಮಿಕ ದೃಷ್ಟಿಯೂ ಮುಖ್ಯ. ಆಧ್ಯಾತ್ಮಿಕವು ಧಾರ್ಮಿಕತೆಯ ಒಟ್ಟಿಗೆ ಸೇರದಿದ್ದರೆ ನಮಗೆ ಚಾತುರ್ಮಾಸ್ಯದ ಪೂರ್ಣಫಲ ಸಿಗುವುದಿಲ್ಲ. ಆಧ್ಯಾತ್ಮಿಕವನ್ನು ತಿಳಿದುಕೊಳ್ಳುವುದಕ್ಕಾಗಿಯೇ ಚಾತುರ್ಮಾಸ್ಯವ್ರತ ಇರುವುದು. ಅದಕ್ಕಾಗಿಯೇ ವ್ಯಾಸಪೂಜೆಯೊಂದಿಗೆ ಚಾತುರ್ಮಾಸ್ಯದ ಆರಂಭ. ಇಡೀ ಲೋಕಕ್ಕೆ ಜ್ಞಾನರಾಶಿಯನ್ನು ನೀಡಿದವರು ವೇದವ್ಯಾಸರು. ಈ ಹಿನ್ನೆಲೆಯಲ್ಲಿ ನಾವು ಚಾತುರ್ಮಾಸ್ಯದಲ್ಲಿ ಭಾಗವಹಿಸಿ ಆಧ್ಯಾತ್ಮಿಕ ಜ್ಞಾನವನ್ನು ನಮ್ಮದಾಗಿಸಿಕೊಳ್ಳಬೇಕು.

ಇಂದು ಸಮಾಜದಲ್ಲಿ ಪರಿಸ್ಥಿತಿ ಬಹಳ ವಿಷಮವಾಗಿದೆ. ಈ ಮಧ್ಯೆ ಚಾತುರ್ಮಾಸ್ಯವನ್ನು ಯಶಸ್ವಿಗೊಳಿಸಬೇಕಾಗಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು. ಸರ್ಕಾರ ಯಾವ ನಿಯಮಗಳನ್ನು ಹಾಕಿದೆಯೋ ಅದನ್ನು ಅನುಸರಿಸುವುದು ನಮ್ಮ ಕರ್ತವ್ಯ. ಕೊರೊನಾ ಸೋಂಕು ಯಾವ ಕಾರಣಕ್ಕೂ ನಮ್ಮ ಕಡೆ ಸುಳಿಯದಂತೆ ಎಚ್ಚರವಹಿಸಬೇಕು. ಇದಕ್ಕೆ ಅಧ್ಯಾತ್ಮವನ್ನು ನಾವು ಗಟ್ಟಿಯಾಗಿ ಹಿಡಿದುಕೊಳ್ಳಬೇಕು. ಆಗ ನಮಗೆ ನಾವೇ ನಿಯಮವನ್ನು ಹಾಕಿಕೊಳ್ಳುತ್ತೇವೆ. ಬೇರೆಯವರು ನಮಗೆ ನಿಯಮವನ್ನು ವಿಧಿಸಬೇಕಾಗುವುದಿಲ್ಲ.

–ಶ್ರೀ ಶಂಕರಭಾರತೀ ಮಹಾಸ್ವಾಮಿಗಳು,

ADVERTISEMENT

ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠ, ಕೃಷ್ಣರಾಜನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.