ಹಾವೇರಿ:ಶತಮಾನದ ನಂತರ ನಗರದ ಗ್ರಾಮ ದೇವತೆ ದ್ಯಾಮವ್ವ ದೇವಿಯ ಒಂದು ವಾರದ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಅರ್ಚಕರಾದ ದೊಡ್ಡ ದ್ಯಾಮಣ್ಣ ಬಡಿಗೇರ ಅವರು ದೇವಿಗೆ ವಿಶೇಷ ಪೂಜೆ ಸಲ್ಲಿಸಿವ ಮೂಲಕ ಚಾಲನೆ ನೀಡಿದರು.
ಚೆನ್ನಪ್ಪ ಬಾಲೇಹೊಸೂರ ದಂಪತಿ ದ್ಯಾಮವ್ವ ದೇವಿ ಮಹಿಳಾ ಭಕ್ತರಿಗೆ ಪಡ್ಲಿಗೆ ತುಂಬಿದರು. ನಂತರ ಜೋಳದಿಂದ ರಂಗಾ ಮತ್ತು ಅಂಕೆ ಹಾಕುವ ಮೂಲಕ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ವಿಧ್ಯುಕ್ತವಾಗಿ ಆರಂಭಗೊಂಡವು.
ದ್ಯಾಮವ್ವ ದೇವಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಬಸವರಾಜ ಹೂಗಾರ, ಕಾರ್ಯದರ್ಶಿ ಅಶೋಕ ಮುದಗಲ್, ಗೌರವ ಕಾರ್ಯದರ್ಶಿ ಗಂಗಾಧರ ಹೂಗಾರ, ಸದಸ್ಯರಾದ ಕೋಟ್ರಯ್ಯ ಕಬ್ಬಿನಕಂತಿಮಠ, ಬಸಪ್ಪ ಮುಗದೂರ ಹಾಗೂ ಯುವಕ ಮಂಡಳಿ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.