ADVERTISEMENT

ದೀಪ ಹಚ್ಚಿ ಭಾವೈಕ್ಯತೆ ಬೆಳಗಿದರು..

ಲಾಡ್ಲಾಪುರ : ಶಿವರಾತ್ರಿ ಜಾಗರಣೆ ಉತ್ಸವದಲ್ಲೊಂದು ವಿಶೇಷತೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 11:24 IST
Last Updated 22 ಫೆಬ್ರುವರಿ 2020, 11:24 IST
ವಾಡಿ ಸಮೀಪದ ಲಾಡ್ಲಾಪುರದ ಹಾಜಿಸರ್ವರ್ ಬೆಟ್ಟದಲ್ಲಿ ಶಿವರಾತ್ರಿ ಜಾಗರಣೆ ನಿಮಿತ್ತ ಹಿಂದೂ– ಮುಸ್ಲಿಂ ಬಾಂಧವರು ಸೇರಿ ದೀಪ ಬೆಳಗಿದರು
ವಾಡಿ ಸಮೀಪದ ಲಾಡ್ಲಾಪುರದ ಹಾಜಿಸರ್ವರ್ ಬೆಟ್ಟದಲ್ಲಿ ಶಿವರಾತ್ರಿ ಜಾಗರಣೆ ನಿಮಿತ್ತ ಹಿಂದೂ– ಮುಸ್ಲಿಂ ಬಾಂಧವರು ಸೇರಿ ದೀಪ ಬೆಳಗಿದರು   

ವಾಡಿ: ಸಮೀಪದ ಲಾಡ್ಲಾಪುರ ಗ್ರಾಮದ ಹಾಜಿಸರ್ವರ್ (ಹಾದೀಶರಣ) ಬೆಟ್ಟದಲ್ಲಿ ಶಿವರಾತ್ರಿ ಜಾಗರಣೆ ನಿಮಿತ್ತಶುಕ್ರವಾರ ಸಂಜೆ ಹಿಂದೂ–ಮುಸ್ಲಿಂ ಬಾಂಧವರು ಸೇರಿ ದೀಪ ಬೆಳಗಿಸುವುದರ ಮೂಲಕ ಭಾವೈಕ್ಯತೆ ಸಂದೇಶ ಸಾರಿದರು.

ಮಹಾಶಿವರಾತ್ರಿ ಹಬ್ಬದಂದು ಗ್ರಾಮಸ್ಥರು ಒಟ್ಟಾಗಿ ಸೇರಿ ಸಂಭ್ರಮದಿಂದ ಜಾಗರಣೆ ಮಾಡಿದರು. ಗ್ರಾಮಸ್ಥರು ಮನೆಯಲ್ಲಿ ತಯಾರಿಸಿದ ಹೆಸರು, ಕಡಲೆ ಗುಗ್ಗರಿ, ಶೇಂಗಾ, ರವೆಹುಂಡಿ ಹಾಗೂ ಹಣ್ಣು ಹಂಪಲುಗಳನ್ನು ಪರಸ್ಪರ ಹಂಚಿ ಸಂಭ್ರಮಿಸಿದರು.

'ಶಿವರಾತ್ರಿ ಜಾಗರಣೆಯಂದು ಹಾಜಿಸರ್ವರ್ ಗದ್ದುಗೆಯಲ್ಲಿ ಮಣ್ಣಿನ ಹಣತೆಗಳನ್ನು ಸಾಲಾಗಿ ಇಟ್ಟು ಎಣ್ಣೆ ಸುರಿದು ದೀಪ ಹಚ್ಚುವುದು ಅತ್ಯಂತ ಖುಷಿ ಕೊಟ್ಟಿದೆ. ಗ್ರಾಮದ ಹಿಂದೂ ಮುಸ್ಲಿಂ ಎಂಬ ಬೇಧವೆನಿಸದೆ ದೀಪ ಹಚ್ಚುತ್ತೇವೆ’ ಎಂದು ಮೈನುದ್ದೀನ್ ಖುರೇಷಿ ಹೇಳಿಕೆ.

ADVERTISEMENT

ಹೊಸ ಬಟ್ಟೆ ಧರಿಸಿ ಬಂದಿದ್ದ ಮಹಿಳೆಯರು ಮಕ್ಕಳು ಸಾಲಾಗಿ ಮಣ್ಣಿನ ಹಣತೆ ಗಳನ್ನು ಇಟ್ಟು ದೀಪ ಹಚ್ಚುತ್ತಿರುವುದು ಕಂಡು ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.