ADVERTISEMENT

Video | ಮಸೀದಿ ದರ್ಶನ: ಭಾವೈಕ್ಯದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2022, 13:09 IST
Last Updated 11 ನವೆಂಬರ್ 2022, 13:09 IST

ಸೌಹಾರ್ದ, ಸಾಮರಸ್ಯ, ಸಹಬಾಳ್ವೆಯನ್ನು ಗಟ್ಟಿಗೊಳಿಸಲು ಹಾಗೂ ಪರಸ್ಪರ ಅರಿತುಕೊಳ್ಳುವ ಮೂಲಕ ಅಪನಂಬಿಕೆ, ಪೂರ್ವಾಗ್ರಹಗಳನ್ನು ದೂರ ಮಾಡುವ ಪ್ರಯತ್ನವನ್ನು ಬೆನ್ಸನ್ ಟೌನ್ ನ ಮಸಜೀದ್–ಎ–ಖಾದ್ರಿಯಾ ಕೈಗೊಂಡಿತ್ತು. ‘ಮಸೀದಿ ದರ್ಶನ, ಮಸೀದಿಯ ಒಳಗೊಂದು ಸುತ್ತು’ ಎಂಬ ಕಾರ್ಯಕ್ರಮದಲ್ಲಿ ಇಸ್ಲಾಂ ಧರ್ಮದ ಉಗಮ, ಪ್ರವಾದಿ ಮಹಮ್ಮದ್ ಅವರ ಜೀವನ ದರ್ಶನ ಸೇರಿ ಇಸ್ಲಾಂ ಧರ್ಮಕ್ಕೆ ಸಂಬಂಧಪಟ್ಟ ವಸ್ತು ಪ್ರದರ್ಶನ, ನಮಾಜ್‌ ಮಾಡುವ ವಿಧಿ–ವಿಧಾನಗಳ ವೀಕ್ಷಣೆ ಮತ್ತು ಪ್ರಶ್ನೋತ್ತರ–ಸಂವಾದ ಕಾರ್ಯಕ್ರಮದಲ್ಲಿ ಎಲ್ಲ ಧರ್ಮೀಯರು ಪಾಲ್ಗೊಂಡಿದ್ದರು. ಇದು ಭಾವೈಕ್ಯಕ್ಕೆ ಸಾಕ್ಷಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.