ADVERTISEMENT

ವಚನಾಮೃತ: ಸುಬುದ್ಧಿ ಅಳವಡಿಸಿಕೊಳ್ಳಬೇಕು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 8:23 IST
Last Updated 23 ಸೆಪ್ಟೆಂಬರ್ 2020, 8:23 IST
ಡಾ.ಅಲ್ಲಮಪ್ರಭು ಸ್ವಾಮೀಜಿ
ಡಾ.ಅಲ್ಲಮಪ್ರಭು ಸ್ವಾಮೀಜಿ   

ವಿಷಯವೆಂಬ ಹಸುರನೆನ್ನ ಮುಂದೆ ತಂದು ಪಸರಿಸದಿರಯ್ಯ// ಪಶುವೇನು ಬಲ್ಲುದು ಹಸುರೆಂದೆಳೆಸುವುದು// ವಿಷಯರಹಿತನ ಮಾಡಿ, ಭಕ್ತಿರಸವ ದಣಿಯ ಮೇಯಿಸಿ// ಸುಬುದ್ಧಿಯೆಂಬ ಉದಕವನೆರೆದು ನೋಡಿ ಸಲಹಯ್ಯ// ಕೂಡಲಸಂಗಮದೇವಾ...

ಭೌತಿಕವಾಗಿರುವ ಈ ಜಗತ್ತಿನಲ್ಲಿ ಮನುಷ್ಯನಿಗೆ ವಿಷಯವಾಸನೆಗಳು ಮಾಯೆಯಾಗಿ ಕಾಡುತ್ತವೆ. ಪಶುಗಳಿಗೆ ಹಸಿರಾದ ಹುಲ್ಲು ತುಂಬಾ ಇಷ್ಟ. ಹಾಗೆಯೇ ಮಾನವನೆಂಬ ಈ ಪಶುವಿಗೆ ವಿಷಯವಾಸನೆಗಳು ತುಂಬಾ ಇಷ್ಟ. ಸಂಸಾರವೆಂಬ ವಿಷಯವಾಸನೆಗೆ ಅಂಟಿಕೊಂಡ ಮಾನವನು ತನ್ನ ಆತ್ಯಂತಿಕ ಸುಖದ ಕುರಿತು ಆಲೋಚಿಸುವುದೆ ಇಲ್ಲ. ಭಕ್ತಿ ಮತ್ತು ಸುಬುದ್ಧಿಗಳು ಮಾನವನನ್ನು ವಿಷಯವಾಸನೆಗಳಿಂದ ಮುಕ್ತವಾಗಿಸುತ್ತವೆ. ನೀರು ಮತ್ತು ಆಹಾರ ಮಾನವನ ಜೀವನಾವಶ್ಯ ವಸ್ತುಗಳು. ಅದಕ್ಕೆ ಬಸವಣ್ಣನವರು ಸುಬುದ್ಧಿಯೆಂಬ ನೀರಿನೊಂದಿಗೆ ಭಕ್ತಿ ರಸ ಎಂಬ ಆಹಾರವನ್ನು ಸದಾವಕಾಲ ನೀಡಿ ಸಲಹು ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ. ಅದೇ ರೀತಿಯಲ್ಲಿ ನಾವೆಲ್ಲರೂ ಭಕ್ತಿಯ ಹಾದಿಯಲ್ಲಿ ಸುಬುದ್ಧಿ ಅಳವಡಿಸಿಕೊಂಡು ಮುಂದೆ ಸಾಗಬೇಕು.

-ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.