ADVERTISEMENT

ಸದ್ಗತಿಗೆ ಪ್ರಯತ್ನಿಸಬೇಕು: ಡಾ.ಅಲ್ಲಮಪ್ರಭು ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 12:08 IST
Last Updated 6 ಅಕ್ಟೋಬರ್ 2021, 12:08 IST
ಡಾ.ಅಲ್ಲಮಪ್ರಭು ಸ್ವಾಮೀಜಿ
ಡಾ.ಅಲ್ಲಮಪ್ರಭು ಸ್ವಾಮೀಜಿ   

ತುಪ್ಪದ ಸವಿಗೆ ಅಲಗ ನೆಕ್ಕುವ ಸೊಣಗನಂತೆ

ಎನ್ನ ಬಾಳುವೆ!

ಸಂಸಾರಸಂಗವ ಬಿಡದು ನೋಡೆನ್ನಮನವು;

ADVERTISEMENT

ಈ ನಾಯಿತನವ ಮಾಣಿಸು

ಕೂಡಲಸಂಗಮದೇವಯ್ಯಾ ನಿಮ್ಮ ಧರ್ಮ.

ಮಾನವನಿಗೆ ಸಂಸಾರದ ಬಂಧನವು ಸದಾ ಕಾಲ ಇರುವಂಥದು. ಅವನಿಗೆ ಅದರಲ್ಲಿಯೆ ಖುಷಿ ಇದ್ದಂತೆ ತೋರಿದರೂ ವಾಸ್ತವವಾಗಿ ಅದರಿಂದಲೆ ಹೆಚ್ಚಿನ
ದುಃಖವನ್ನು ಅನುಭವಿಸುತ್ತಾನೆ ಎನ್ನುವುದನ್ನು ಬಸವಣ್ಣನವರು ಉದಾಹರಣೆಯ ಮುಖಾಂತರ ತಿಳಿಸಿದ್ದಾರೆ. ನಾಯಿಯು ಹರಿತವಾದ ಖಡ್ಗಕ್ಕೆ ಹಚ್ಚಿದ ತುಪ್ಪವನ್ನು ನೆಕ್ಕುವ ಬರದಲ್ಲಿ ತನ್ನ ನಾಲಿಗೆಯನ್ನು ಖಡ್ಗಕ್ಕೆ ಒಡ್ಡಿ ರಕ್ತವು ಸುರಿಯುವುದು. ಅದೇ ರಕ್ತವನ್ನು ಅದು ತುಪ್ಪವೆಂದು ಭಾವಿಸಿ ಅದರಲ್ಲಿಯೇ ಖುಷಿ ಪಡುವಂತೆ ಮಾನವನು ಕೂಡ ಸಂಸಾರದಲ್ಲಿಯೆ ಸುಖವಿದೆ ಎಂದು ಭಾವಿಸಿ ತನ್ನ ಜೀವಮಾನವಿಡಿ ಬಂಧು–ಬಳಗದವರ ಸಂತೋಷವನ್ನೆ ತನ್ನ ಸಂತೋಷವೆಂದು ಭಾವಿಸುತ್ತಾನೆ. ಕೊನೆಗೆ ಸಂಸಾರವು ಕೇವಲ ಜೀವನ ಕಳೆಯುವ ಮಾಧ್ಯಮ ಎಂಬ ಅರಿವಾಗುವ ವೇಳೆಗೆ ತನ್ನ ಆಯುಷ್ಯವನ್ನೆಲ್ಲ ಮುಗಿಸಿ ಅಂತ್ಯಕ್ಕೆ ಬಂದಿರುತ್ತಾನೆ. ಆಗ ಯಾವ ಸಾಧನೆಯೂ ಸಾಧ್ಯವಾಗುವುದಿಲ್ಲ. ಅದಕ್ಕೆ ಸಂಸಾರದಲ್ಲಿದ್ದುಕೊಂಡೆ ಸದ್ಗತಿಯನ್ನು ಹೊಂದಬೇಕು ಎನ್ನುವುದು ಬಸವಾದಿ ಶರಣರ ಅಭಿಪ್ರಾಯವಾಗಿದೆ. ಎಲ್ಲರೂ ಸದ್ಗತಿಗೆ ಪ್ರಯತ್ನಿಸಬೇಕು.

- ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.