ADVERTISEMENT

ವಚನಾಮೃತ | ಸಂಪತ್ತಿನಿಂದ ಅಹಂಕಾರ ಹೆಚ್ಚದಿರಲಿ

ಪ್ರಜಾವಾಣಿ ವಿಶೇಷ
Published 16 ಡಿಸೆಂಬರ್ 2020, 6:00 IST
Last Updated 16 ಡಿಸೆಂಬರ್ 2020, 6:00 IST
ಡಾ.ಅಲ್ಲಮಪ್ರಭು ಸ್ವಾಮೀಜಿ
ಡಾ.ಅಲ್ಲಮಪ್ರಭು ಸ್ವಾಮೀಜಿ   

ಹಾವು ತಿಂದವರ ನುಡಿಸಬಹುದು

ಗರ ಹೊಡೆದವರ ನುಡಿಸಬಹುದು

ಸಿರಿಗರ ಹೊಡೆದವರ ನುಡಿಸಲಾಗದು

ADVERTISEMENT

ಬಡತನವೆಂಬ ಮಂತ್ರವಾದಿ

ಹೊಗಲೊಡನೆ ಒಡನೆ ನುಡಿವರಯ್ಯಾ ಕೂಡಲಸಂಗಮದೇವಾ

ಈ ಜಗತ್ತಿನಲ್ಲಿರುವ ಪ್ರತಿಯೊಬ್ಬ ಮಾನವನೂ ತನ್ನದೆ ಆದ ಅಪೇಕ್ಷೆ ಆಲೋಚನೆಗಳಲ್ಲಿ ಕಾಲ ಕಳೆಯುತ್ತಿರುತ್ತಾನೆ. ಶ್ರೀಮಂತಿಕೆ ಎಂಬುದು ತೃಣ ಸಮಾನ ಎಂದು ಆಲೋಚಿಸುವವರ ಸಂಖ್ಯೆ ಬಹಳ ವಿರಳವಾಗಿರುತ್ತದೆ. ಅದಕ್ಕೆ ಬಸವಣ್ಣನವರು ಈ ವಚನ ರಚಿಸಿದ್ದಾರೆ. ಎಂತಹ ವ್ಯಕಿಯನ್ನಾದರೂ ಬದಲಿಸಬಹುದು. ಆದರೆ, ಶ್ರೀಮಂತಿಕೆ ಎನ್ನುವ ಮದವನ್ನು ತುಂಬಿದ ವ್ಯಕ್ತಿಯನ್ನು ಬದಲಿಸಲು ಬಡತನದಿಂದ ಮಾತ್ರ ಸಾಧ್ಯ ಎನ್ನುತ್ತಾರೆ. ಹಾವು ಕಚ್ಚಿ ಪ್ರಜ್ಞೆ ತಪ್ಪಿದವರನ್ನು ಮಾತನಾಡಿಸಬಹುದು. ಭೂತಾದಿ ದೆವ್ವ ಹಿಡಿದವರನ್ನು ಮಾತನಾಡಿಸಬಹುದು. ಆದರೆ, ಧನಮದವೇರಿದವರನ್ನು ಮಾತನಾಡಿಸಲಾಗದು. ಅಂಥವರ ಮದ ಇಳಿಯಬೇಕಾದರೆ ಬಡತನದಿಂದ ಮಾತ್ರ ಸಾಧ್ಯ. ಬಡತನ ಎಂಬ ಮಂತ್ರದ ಆಗಮನವಾಯಿತೆಂದರೆ ಧನಮದದ ಹಿಡಿತ ನಿಧಾನವಾಗಿ ಕಡಿಮೆಯಾಗಿ ಎಲ್ಲರೊಡನೆ ಬೆರೆಯತೊಡಗುತ್ತಾರೆ. ಸಂಪತ್ತಿನಿಂದ ಬರುವ ಅಜ್ಞಾನ ತುಂಬಿದ ಅಹಂಕಾರವನ್ನು ಕಡಿಮೆ ಮಾಡುವ ಮಹತ್ವವನ್ನು ಈ ವಚನದಲ್ಲಿ ತಿಳಿಸಿದ್ದಾರೆ. ಇದನ್ನು ಎಲ್ಲರೂ ಪಾಲಿಸಿದರೆ, ಸಂಪತ್ತಿನ ಅಹಂ ಅಳಿಯುತ್ತದೆ. ಸಂಪತ್ತು ಹೆಚ್ಚಿದಂತೆಲ್ಲಾ ಮದ ಕಡಿಮೆ ಮಾಡಿಕೊಳ್ಳುತ್ತಾ ಹೋಗಬೇಕು.

– ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.