ADVERTISEMENT

ವಚನಾಮೃತ: ಡಾಂಭಿಕ ಭಕ್ತಿ ಬಿಡಿ

ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ 
Published 28 ಆಗಸ್ಟ್ 2020, 10:47 IST
Last Updated 28 ಆಗಸ್ಟ್ 2020, 10:47 IST
ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ 
ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ    

ನಿಜವಾದ ಭಕ್ತಿ ಬಹಳ ಸರಳವೂ, ಅರ್ಥಗರ್ಭಿತವೂ ಆಗಿದ್ದರೂ ಬಹುಪಾಲು ಜನರು ಡಾಂಭಿಕ ಭಕ್ತಿ ಮಾಡುವುದರಲ್ಲೇ ಆಸಕ್ತರು. ಹಿಡಿದ ಪಥದಲ್ಲಿ ದೃಢತೆಯಿಂದ ನಡೆಯುವ ನಿಷ್ಠೆಯೇ ಅನೇಕರಿಗೆ ಇರುವುದಿಲ್ಲ.

ಬೆಟ್ಟಕ್ಕೆ ಚಳಿಯಾದಡೆ ಏನ ಹೊದಿಸುವರಯ್ಯಾ?

ಬಯಲು ಬೆತ್ತಲೆಯಾದಡೇ ಏನ ಉಡಿಸುವರಯ್ಯಾ?

ADVERTISEMENT

ಭಕ್ತನು ಭವಿಯಾದಡೆ ಅದನೇನುಪಮಿಸುವೆನಯ್ಯಾ ಗುಹೇಶ್ವರಾ...

ಬೃಹತ್ತಾದ ಬೆಟ್ಟಕ್ಕೆ ಚಳಿಯಾದರೆ ಏನನ್ನು ಹೊದಿಸಲು ಸಾಧ್ಯ? ವಿಶಾಲವಾದ ಬಯಲು ಬೆತ್ತಲೆ ಇದೆ. ಆದರೆ, ಅದಕ್ಕೆ ಏನಾದರೂ ಉಡಿಸಲು ಸಾಧ್ಯವೆ? ಹಾಗೆ ಸನ್ಮಾರ್ಗದಲ್ಲಿ ನಡೆಯಬೇಕಾದ, ಇನ್ನೊಬ್ಬರಿಗೆ ಮಾದರಿಯಾಗಿ ನಿಲ್ಲಬೇಕಾದ ಭಕ್ತನು ದುರ್ವ್ಯಸನಿಯೂ, ದುರ್ಗುಣಿಯೂ, ದುರಾಚಾರಿಯೂ ಆದರೆ ಇನ್ನು ಏನು ತಾನೆ ಹೇಳಲು ಸಾಧ್ಯ ಎಂದು ಅಲ್ಲಮಪ್ರಭುಗಳು ತಮ್ಮ ವಚನದಲ್ಲಿ ಹೇಳಿದ್ದಾರೆ.

ಭಕ್ತಿ ಇಲ್ಲದ ಮಾನವ ದೇವಾಲಯ ಸುತ್ತಿದರೇ ಎತ್ತು ಗಾಣವನ್ನು ಸುತ್ತಿದಂತೆ ಸರ್ವಜ್ಞ… ಅದಕ್ಕಾಗಿ ಭಕ್ತರು ಡಾಂಭಿಕ ಭಕ್ತಿ ಬಿಟ್ಟು ನಿಜವಾದ ಭಕ್ತಿ ಮಾಡಿದಾಗ ಬದುಕು ಸಾರ್ಥಕವಾಗುವುದು.

- ಲೇಖಕರು: ಪದ್ಮರಾಜ ಒಡೆಯರ ಹಿರೇಮಠ, ಬಸವನಬಾಗೇವಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.